ಧಾರವಾಡ: ನಕಲಿ ಅಂಕಪಟ್ಟಿ ನೀಡಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿ ವಿರುದ್ಧ ಧಾರವಾಡದ ಉಪನಗರ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಅಶ್ವಿತಾ ಗುನಗಾ ಎಂಬುವವರೇ ಬಿ.ಕಾಂ. 6 ನೇ ಸೆಮಿಸ್ಟರ್‌ನ ನಕಲಿ ಅಂಕಪಟ್ಟಿ ಸಿದ್ಧಪಡಿಸಿ ಎಂ.ಕಾಂ. ಪದವಿಗೆ ಪ್ರವೇಶ ಪಡೆದವರು. ನಕಲಿ ಅಂಕಪಟ್ಟಿ ಸಿದ್ಧಪಡಿಸಲು ಸುದರ್ಶನ ಎಂಬ ವ್ಯಕ್ತಿಗೆ ಹಣ ನೀಡಿದ್ದರು.
ಈ ಕಾರ್ಯದಲ್ಲಿ ಅಶ್ವಿತಾ ಅವರಿಗೆ ಅಶ್ವಿನ್ ಗುನಗಾ, ಅರುಣ್ ಗುನಗಾ ಹಾಗೂ ಅನೂಪ್ ಡಂಬಳ ನೆರವು ನೀಡಿದ್ದರು.
6 ನೇ ಸೆಮಿಸ್ಟರ್‌ನ ಬಿಜಿನೆಸ್ ಲಾ ವಿಷಯವನ್ನು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ, ಆ ಅಂಕಪಟ್ಟಿಯನ್ನು ತಿದ್ದಿರುವ ಆರೋಪ ಇವರ ಮೇಲಿದೆ.
ಹೀಗಾಗಿ ಇವರ ಮೇಲೆ ವಂಚನೆ ಆರೋಪ ಹೊರಿಸಿ ಕರ್ನಾಟಕ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಅಧಿಕಾರಿ ಪ್ರಕಾಶ ಸಾಲಿಯವರ ಪ್ರಕರಣ ದಾಖಲಿಸಿದ್ದಾರೆ.
Kshetra Samachara
05/01/2021 08:36 am