ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿದ್ಧಾರೂಢರ ಮಠದಲ್ಲಿನ ಹುಂಡಿಗೆ ಕನ್ನ ಹಾಕಿದ ಖದೀಮರು

ಹುಬ್ಬಳ್ಳಿ: ಬೀಗ ಮುರಿದು, ಹುಂಡಿ ಕಳ್ಳತನದ ಮಾಡಿರುವ ಘಟನೆ ಹುಬ್ಬಳ್ಳಿಯ ಕುಸುಗಲ್ ಗ್ರಾಮದಲ್ಲಿರುವ ಸಿದ್ಧಾರೂಢರ ಮಠದಲ್ಲಿ ನಡೆದಿದೆ.

ಮುಂಜಾನೆಯ 4 ಗಂಟೆ ಸುಮಾರಿಗೆ, ಸಿದ್ಧಾರೂಢರ ಮಠಕ್ಕೆ ನುಗ್ಗಿದ ಕಳ್ಳರು, ದೇವಸ್ಥಾನದಲ್ಲಿನ ಬಾಗಿಲಿಗೆ ಹಾಕಿರುವ ಬೀಗ ಮುರಿದು, ಒಳಗಡೆ ಇದ್ದ ಹುಂಡಿ ಎತ್ತಿಕೊಂಡು ಪರಾರಿಯಾಗಿದ್ದಾರೆ.

ಇದರಲ್ಲಿ ಸಾವಿರಾರು ರೂ. ದೇಣಿಗೆ ಹಣ ಸಂಗ್ರಹವಾಗಿತ್ತು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

04/01/2021 12:06 pm

Cinque Terre

105.31 K

Cinque Terre

18

ಸಂಬಂಧಿತ ಸುದ್ದಿ