ಹುಬ್ಬಳ್ಳಿ: ಕಾನೂನು ಬಾಹಿರವಾಗಿ ಮತ್ತೊಬ್ಬರ ಹೆಸರಿಗೆ ಮನೆ ಪರಾಭಾರೆ ಮಾಡಿಕೊಡುವಂತೆ ಮನೆ ಮಾಲೀಕರಿಗೆ ಜೀವ ಬೆದರಿಕೆ ಹಾಕಿರುವ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಕಾನ್ ಸ್ಟೇಬಲ್ ವಿರುದ್ಧ ಅದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವನಗರ ಪೊಲೀಸ್ ಠಾಣೆಯಲ್ಲಿ ಪಿಐ ವಿರುದ್ಧ ಪ್ರಕರಣ ದಾಖಲಾದ ಪ್ರಕರಣ ಮಾಸುವ ಮೊದಲೇ ಅಂತಹುದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು,ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಕಾನ್ ಸ್ಟೇಬಲ್ ಲಕ್ಷ್ಮಣ ನಾಯಕ್ ವಿರುದ್ಧ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಾಗಿದೆ.
ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದ ಚಂದ್ರಶೇಖರ ಬಿರಾದಾರ ಎಂಬುವವರು ಸಾಲ ಮಾಡಿ ಆನಂದನಗರದಲ್ಲಿ ಮನೆ ಖರೀದಿಸಿದ್ದರು.
2008ರಲ್ಲಿ ಶ್ರೀಕಾಂತ್ ಎಂಬುವವರಿಗೆ ಲೀಸ್ ನೀಡಿದ್ದರು.ಲೀಸ್ ಅವಧಿ ಮುಗಿದ ಬಳಿಕ ಶ್ರೀಕಾಂತ್ ನಕಲಿ ದಾಖಲೆ ಸೃಷ್ಟಿಸಿ ಈ ಮನೆ ತನ್ನದೇ ಎಂದು ಚಂದ್ರಶೇಖರ ವಿರುದ್ಧವೇ ದೂರು ನೀಡಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಕುರಿತು ಹಳೇ ಹುಬ್ಬಳ್ಳಿ ಠಾಣೆಗೆ ದೂರು ನೀಡಲು ಹೋದರೆ ಕಾನ್ ಸ್ಟೇಬಲ್ ಲಕ್ಷ್ಮಣ ನಾಯಕ ಜೀವ ಬೆದರಿಕೆ ಹಾಕಿ,ಕಿರುಕುಳ ನೀಡುತ್ತಿದ್ದಾರೆ ಎಂದು ಚಂದ್ರಶೇಖರ ಆರೋಪಿಸಿದ್ದಾರೆ.
ಜನರ ರಕ್ಷಣೆ ಮಾಡಬೇಕಾದ ಅರಕ್ಷಕರೇ ಹೀಗೆ ಮಾಡಿದರೇ ಜನಸಾಮಾನ್ಯರಿಗೆ ರಕ್ಷಣೆ ಕೊಡುವವರು ಯಾರು ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ.
ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತ ಲಾಬುರಾಮ್ ತಿಳಿಸಿದ್ದಾರೆ.
Kshetra Samachara
31/12/2020 01:02 pm