ಹುಬ್ಬಳ್ಳಿ: ಇಲ್ಲಿನ ದೇವಾಂಗಪೇಠ ಬಡಾವಣೆಯಲ್ಲಿ ಬುಧವಾರ ಮಧ್ಯರಾತ್ರಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಚರಂಡಿಗೆ ಎಸೆದ ಘಟನೆ ವಾಣಿಜ್ಯ ನಗರಿಯ ಜನರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಸದ್ಯ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ದೇವಾಂಗಪೇಟೆ ಗುಡ್ಡದ ಓಣಿಯ ಮಾಬೂಸಾಬ್ ಅಲ್ಲಾಭಕ್ಷ್ ಶಿವಳ್ಳಿ (24) ಕೊಲೆಯಾದ ಯುವಕ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ನಿನ್ನೆ ಭೇಟಿ ನೀಡಿದ್ದ ಅಶೋಕನಗರ ಪೊಲೀಸರು ಪರಿಶೀಲಿಸಿದ್ದು, ಹಂತಕರ ಪತ್ತೆ ಕಾರ್ಯ ಕೈಗೊಂಡಿದ್ದಾರೆ.
Kshetra Samachara
31/12/2020 12:23 pm