ಹುಬ್ಬಳ್ಳಿ : ಕ್ಷುಲ್ಲಕ ಕಾರಣಕ್ಕೆ ವಾಣಿಜ್ಯ ನಗರಿಯಲ್ಲಿ ಮಧ್ಯರಾತ್ರಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಚರಂಡಿಗೆ ಎಸೆಯಲಾಗಿದೆ.
ಹುಬ್ಬಳ್ಳಿಯ ದೇವಾಂಗಪೇಠ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು ಮಾಬುಸಾಬ್ ಅಲ್ಲಾಬಕ್ಷ ಶಿವಳ್ಳಿ ಕೊಲೆಯಾದ ವ್ಯಕ್ತಿಯಾಗಿದ್ದಾನೆ.
ಮಾರಾಕಾಸ್ತ್ರಗಳಿಂದ ದುಷ್ಕರ್ಮಿಗಳು ವ್ಯಕ್ತಿಯನ್ನು ಕೊಚ್ಚಿ ಕೊಲೆಗೈದಿದ್ದಾರೆ.
ಕಟ್ಟಡ ಕಾರ್ಮಿಕ ಕೆಲಸ ಮಾಡಿಕೊಂಡಿದ್ದ ಮಾಬುಸಾಬ ಶಿವಳ್ಳಿ ಆಸೀಪ್ ಎಂಬಾತನ ಜೊತೆ ಈ ಹಿಂದೆ ಗಲಾಟೆ ಮಾಡಿಕೊಂಡಿದ್ದ ಹಾಗಾಗಿ ಮಾಬುಸಾಬ ಕುಟುಂಬಸ್ಥರು ಆಸೀಪ್ ಎಂಬಾತನ ಮೇಲೆ ಕೊಲೆ ಆರೋಪ ಮಾಡಿದ್ದಾರೆ.
ಸ್ಥಳಕ್ಕೆ ಅಶೋಕ ನಗರ ಪೊಲೀಸರ ಭೇಟಿ, ಪರಿಶೀಲನೆ ಮಾಡಿದ್ದಾರೆ.
Kshetra Samachara
30/12/2020 10:09 am