ಹುಬ್ಬಳ್ಳಿ: ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಸಿಲುಕಿಕೊಂಡಿದ್ದ ಹೋಟೆಲ್ ಕಾರ್ಮಿಕರು ಆನ್ ಲಾಕ್ ಬಳಿಕ ಕೊಂಚ ದುಡಿಮೆ ಹುಡುಕಿಕೊಂಡು ವಾಣಿಜ್ಯನಗರಿ ಹುಬ್ಬಳ್ಳಿಯತ್ತ ಆಗಮಿಸಿದರೂ ಕೂಡ ಒಂದಿಲ್ಲೊಂದು ಸಮಸ್ಯೆ ಅನುಭವಿಸುವಂತಾಗಿದೆ.
ಪೊಲೀಸರ ತೊಂದರೆಯಿಂದ ಬೇಸತ್ತಿರುವ ಹೊಟೇಲ್ ಕಾರ್ಮಿಕರು ಮಾಧ್ಯಮದ ಮುಂದೆ ಕಣ್ಣೀರು ಹಾಕುತ್ತಿದ್ದಾರೆ.
ಸರ್ಕಾರದ ನಿರ್ದೇಶನದಂತೆ ಹೊಟೇಲ್ ಬಂದ್ ಮಾಡಿ ಊಟ ಮಾಡಿ ಬೋರ್ಡ್ ತರಲು ಹೊರ ಹೋದ ಹೊಟೇಲ್ ಕಾರ್ಮಿಕನೊಬ್ಬನಿಗೆ ಹಾಗೂ ಇನ್ನೋರ್ವ ಹೊಟೇಲ್ ಸಿಬ್ಬಂದಿ ಮೇಲೆ ಪೊಲೀಸರ ದರ್ಪ ತೋರಿದ ಘಟನೆ ಹುಬ್ಬಳ್ಳಿ ಹೊಟೇಲವೊಂದರಲ್ಲಿ ನಡೆದಿದೆ.
ಕಳೆದ ಐದಾರು ತಿಂಗಳಿನಿಂದ ಕೆಲಸ ಕಾರ್ಯವಿಲ್ಲದೇ ಮನೆಯಲ್ಲಿಯೇ ಕುಳಿತು ಉದ್ಯೋಗವಿಲ್ಲದೇ ಮಾನಸಿಕವಾಗಿ ನೊಂದಿದ್ದ ಹೊಟೇಲ್ ಕಾರ್ಮಿಕರು ಈಗ ಪೊಲೀಸರ ಲಾಟಿ ಏಟಿಗೆ ಗುರಿಯಾಗುತ್ತಿದ್ದಾರೆ.
ಸರಿಯಾದ ಸಮಯಕ್ಕೆ ಹೊಟೇಲ್ ಬಂದ್ ಮಾಡಿ ಬಳಿಕ ಹೊಟೇಲ್ ನಾಮಫಲಕವನ್ನು ಒಳಗೆ ತೆಗೆದುಕೊಂಡು ಬರುವ ವೇಳೆ ಆಗಮಿಸಿದ ಶಹರ ಪೊಲೀಸ್ ಠಾಣೆ ಸಿಬ್ಬಂದಿ ಹೊಟೇಲ್ ಕಾರ್ಮಿಕನ ಮೇಲೆ ದರ್ಪ ತೋರಿದ್ದು,
ಮನಬಂದಂತೆ ಹೊಡೆದಿದ್ದಾನೆ ಎಂದು ಹಲ್ಲೆಗೆ ಒಳಗಾದ ಹೊಟೇಲ್ ಕಾರ್ಮಿಕ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾನೆ.
ಊರು ಬಿಟ್ಟು ಊರಿಗೆ ಬಂದಿರುವ ಹೊಟೇಲ್ ಕಾರ್ಮಿಕರು ಹೋಟೆಲ್ ನಲ್ಲಿ ವಾಸ್ತವ್ಯ ಮಾಡುತ್ತಾರೆ.ಈ ನಿಟ್ಟಿನಲ್ಲಿ ಬೋರ್ಡ್ ತರಲು ಹೊರಬಂದ ಹೊಟೇಲ್ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದು,ಈ ಕುರಿತು ಯಾವುದೇ ಪ್ರಕರಣ ಕೂಡ ದಾಖಲಾಗಿಲ್ಲ..
Kshetra Samachara
29/12/2020 03:39 pm