ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀಗಂಧದ ಮರಗಳ ಕಳ್ಳತನ ಜಾಲ "PublicNext ಬೇಟೆ"

ಚಂದನ.. ಚಂದನ.. ಕಸ್ತೂರಿ.. ನಿನ್ನ ರಕ್ಷಣೆ ಮಾಡೋರು ಯಾರ್ರಿ?

ಧಾರವಾಡ: ಶ್ರೀಗಂಧ ಬಹುಬೇಡಿಕೆಯ ಮರ. ಅದಕ್ಕೆ ಚಿನ್ನಕ್ಕಿಂತಲೂ ಹೆಚ್ಚು ಬೇಡಿಕೆ ಇದೆ. ಹೀಗಾಗಿಯೇ ಶ್ರೀಗಂಧ ಮರ ಕಳ್ಳರು ಧಾರವಾಡದ ಅರಣ್ಯಕ್ಕೆ ಗಂಟು ಬಿದ್ದಿದ್ದಾರೆ.

ಧಾರವಾಡದ ಸಂಜೀವಿನಿ ಪಾರ್ಕ್ ಹಾಗೂ ಗುಂಗರಗಟ್ಟಿ ಅರಣ್ಯದಲ್ಲಿ 100ಕ್ಕಿಂತಲೂ ಅಧಿಕ ಶ್ರೀಗಂಧದ ಮರಗಳು ಕಳ್ಳತನವಾಗಿದ್ದು, ಅನೇಕ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ರಾತ್ರೋರಾತ್ರಿ ಕಳ್ಳರು ಶ್ರೀಗಂಧದ ಮರಗಳಿಗೆ ಗರಗಸ ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಸಾಕಷ್ಟು ಜಾಗರೂಕವಾಗಿರುವಾಗಲೂ ಈ ರೀತಿ ಮರಗಳ ದರೋಡೆಯಾಗುತ್ತಿರುವುದು ಎಲ್ಲೋ ಒಂದು ಕಡೆ ಅರಣ್ಯ ಇಲಾಖೆ ಅಧಿಕಾರಿಗಳ ವೈಫಲ್ಯ ಎದ್ದು ಕಾಣುವುದರ ಜೊತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಶ್ರೀಗಂಧ ಕಳ್ಳರೊಂದಿಗೆ ಶಾಮೀಲಾಗಿದ್ದಾರೇನೋ ಎಂಬ ಸಂಶಯ ಕಾಡುತ್ತಿದೆ.

ಈ ದೃಶ್ಯಗಳನ್ನೊಮ್ಮೆ ನೋಡಿ. ಗಂಧದ ಮರಗಳನ್ನು ಕಟಾವು ಮಾಡಿ ಅದನ್ನು ಕಸದಿಂದ ಯಾರಿಗೂ ಗೊತ್ತಾಗಬಾರದೆಂದು ಮುಚ್ಚಲಾಗಿದೆ. ಇದನ್ನೆಲ್ಲ ನೋಡಿದರೆ ಸಂಶಯ ಹುಟ್ಟದೆ ಇನ್ನೇನಾಗುತ್ತದೆ ಅಲ್ಲವೇ?

ಇನ್ನು ಈ ಬಗ್ಗೆ ಡಿಎಪ್ಓ ಯಶಪಾಲ್ ಕ್ಷೀರಸಾಗರ ಅವರನ್ನು ಪ್ರಶ್ನೆ ಮಾಡಿದರೆ, ಸಿಬ್ಬಂದಿ ಕೊರತೆ ಇದೆ ಈಗಾಗಲೇ ಕಳ್ಳತನ ಆಗಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ ಆದಷ್ಟು ಬೇಗ ಪ್ರಕರಣವನ್ನು ಬೆನ್ನತ್ತಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ.

ಒಟ್ಟಿನಲ್ಲಿ ಅರಣ್ಯವನ್ನು ಕಾಯಬೇಕಾದ ಅಧಿಕಾರಿಗಳು ಸಿಬ್ಬಂದಿ ಕೊರತೆ ನೆಪ ಹೇಳಿ, ಶ್ರೀಗಂಧದ ಮರಗಳು ಕಳ್ಳತನವಾಗುತ್ತಿದ್ದರೂ ಮೌನ ವಹಿಸಿದ್ದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Edited By :
Kshetra Samachara

Kshetra Samachara

04/10/2020 09:26 pm

Cinque Terre

50.6 K

Cinque Terre

2

ಸಂಬಂಧಿತ ಸುದ್ದಿ