ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕೋಮು ಗಲಭೆ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ... ಹಳೇ ಹುಬ್ಬಳ್ಳಿಯಲ್ಲಿ ರಾತ್ರಿ ನಡೆದ ಈ ಗಲಭೆಯಲ್ಲಿ ಇಲ್ಲಿಯವರೆಗೆ ಸುಮಾರು 115 ಗಲಭೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಶಾಂತಿಯಿಂದ ಇದ್ದ ಹುಬ್ಬಳ್ಳಿ ಗಲಭೆಗೆ ಹಿಂದೂ ಯುವಕ ಎಡಿಟ್ ಮಾಡಿದ ಆ ವಿಡಿಯೋ ಕಾರಣವಾಗಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಕೋಮು ಗಲಭೆಯಲ್ಲಿ ಕಲ್ಲು ತೂರಾಟದಿಂದ ಪೊಲೀಸರಿಗೆ ಸಾಕಷ್ಟು ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಕಷ್ಟು ಸರ್ಕಾರಿ ಆಸ್ತಿಗೆ ಹಾನಿ ಉಂಟಾಗಿದೆ. ಇನ್ನು ಮುಂದೆ ಈ ರೀತಿ ಧರ್ಮಗಳ ನಡುವೆ ಕೋಮು ಗಲಭೆ ಆಗಬಾರದು ನಾವೆಲ್ಲರೂ ಒಂದೇ, ಒಂದೇ ತಾಯಿಯ ಮಕ್ಕಳಂತೆ ಬಾಳಬೇಕೆಂದು ಇಸ್ಲಾಂ ಧರ್ಮ ಗುರುಗಳು ಜನರಿಗೆ ಮನವರಿಕೆ ಮಾಡುತ್ತಿದ್ದಾರೆ....
ಒಟ್ಟಿನಲ್ಲಿ ಆ 14 ಸೆಕೆಂಡ್ ವೀಡಿಯೋ ಇಡೀ ಹುಬ್ಬಳ್ಳಿಯನ್ನೇ ತಲ್ಲಣಗೊಳಿಸಿದೆ. ಇನ್ಮುಂದೆಯಾದ್ರೂ ನಾವೆಲ್ಲರೂ ಒಂದೇ ಭಾವದಿಂದ ಬಾಳಬೇಕು. ಈ ಕೋಮು ಗಲಭೆಗೆ ಕಾರಣವಾದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಎಲ್ಲರೂ ಶಾಂತಿಯನ್ನು ಕಾಪಾಡಬೇಕೆಂದು ಜನರಲ್ಲಿ ಮನವರಿಕೆ ಮಾಡಿದರು.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/04/2022 09:38 pm