ಧಾರವಾಡ: ಜಾತ್ರೆಗಳಲ್ಲಿ ದೇವರು ತೇರು ಎಳೆದು ರಥೋತ್ಸವ ಕಾರ್ಯಕ್ರಮ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಸ್ವಾಮೀಜಿಯೊಬ್ಬರು ಜನ ಸೇರಿ ಎಳೆಯುವ ದೇವರ ತೇರಿನ ಮೇಲೆ ಹತ್ತಿ ಹುಚ್ಚಾಟ ಮೆರೆದಿದ್ದಾರೆ. ಧಾರವಾಡದ ಮದಿಹಾಳದ ಶ್ರೀ ಆಂಜನೇಯ ದೇವರ ಜಾತ್ರಾ ಮಹೋತ್ಸವದಲ್ಲಿ ತೇರ ಮೇಲೆ ಸ್ವಾಮೀಜಿ ಹತ್ತಿ ಕುಣಿದಾಡಿದ
ಘಟನೆ ನಡೆದಿದೆ.
ಮದಿಹಾಳ ಆಂಜನೇಯ ಸ್ವಾಮಿ ಜಾತ್ರಾ ಅಂಗವಾಗಿ ರಥ ಎಳೆಯುವ ಸಂದರ್ಭದಲ್ಲಿ ರಥದ ಮೇಲೆರಿ ಹುಚ್ಚಾಟ ಮಾಡಿದ ದೇವಸ್ಥಾನದ ಪೂಜಾರಿ ಅಮೃತೇಶ್ವರ ಗುರುಜಿ ರಥೋತ್ಸವಕ್ಕೆ ಅವಮಾನ ಎಸಗಿದ್ದಾರೆ. ಹನುಮಾನ್ ಜಯಂತಿ ಪ್ರಯುಕ್ತ ಜರುಗಿದ ರಥೋತ್ಸವದಲ್ಲಿ ಇಂತಹ ಯಡವಟ್ಟನ್ನ ಸ್ವಾಮೀಜಿ ಮಾಡಿ ಬಿಟ್ಟಿದ್ದಾರೆ.
ಜಾತ್ರೆ ಸಮಯದಲ್ಲಿ ರಥೋತ್ಸವದಲ್ಲಿ ತೇರು ಎಳೆಯುವ ಸಮಯಕ್ಕೆ ಪ್ರತಿ ವರ್ಷವೂ ಕೂಡ ಇದೇ ರೀತಿ ರಥ ಏರುವ ಅಭ್ಯಾಸ ಮಾಡಿಕೊಂಡಿರುವ ಸ್ವಾಮೀಜಿಯ ಈ ನಡೆಗೆ, ಭಕ್ತರು ಈಗ ಬೇಸರಗೊಂಡಿದ್ದಾರೆ.
=======
Kshetra Samachara
16/04/2022 10:21 pm