ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಖಾಸಗಿ ಜಮೀನಿನಲ್ಲಿ ಗಣಿಗಾರಿಕೆ ಪ್ರಶ್ನಿಸಿದ್ದ ಮಾಲೀಕನಿಗೆ ಕೊಲೆ ಬೆದರಿಕೆ

ನಮ್ಮ ಸ್ವಂತ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದಲ್ಲದೆ, ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಧಾರವಾಡ ವಿಭಾಗದ ಸಣ್ಣ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರರಾದ ವಿನಾಯಕ ಹರನಟ್ಟಿ ಹಾಗೂ ಗುತ್ತಿಗೆದಾರ ಸುನಿತ ಹೆಗಡೆ ಸೇರಿ ನಾಲ್ವರ ವಿರುದ್ಧ ಅಳ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದ ಸರ್ವೇ ನಂ 33/ಪಿ 1ನಲ್ಲಿ 4ಎಕರೆ 15ಗುಂಟೆ ಜಮೀನಿನಲ್ಲಿ ಅಕ್ರಮವಾಗಿ ಗಣಿಗಾರಿಗೆ ನಡೆಯುವುದನ್ನ ಕಂಡು ಅಲ್ಲಿ ಕೆಂಪು ಗೊರಚು ಮಣ್ಣು ಹಾಗೂ ಕಲ್ಲುಗಳನ್ನು ಯಾರ ಅನುಮತಿ ಪಡೆದು ತೆಗೆಯುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಅಕ್ರಮವಾಗಿ ಕೂಡಿ ಹಾಕಿದ್ದರು ಎಂದು ಜಮೀನಿನ ಮಾಲೀಕ ಮೃತ್ಯುಂಜಯ ಯರಗಂಬಳಿಮಠ ದೂರಿನಲ್ಲಿ ಹೇಳಿದ್ದಾರೆ. ದೂರು ನೀಡಿ ತಿಂಗಳು ಕಳೆದರೂ ಅಳ್ನಾವರ ಪೊಲೀಸರು ಆರೋಪಿಗಳ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ನಿಜಕ್ಕೂ ಅನುಮಾನ ಹುಟ್ಟಿಸುವಂತಿದೆ ಎಂದು ವಕೀಲರು ಆಗಿರುವ ಯರಗಂಬಳಿಮಠ ಆರೋಪಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟಂತೆ ನಮ್ಮ ವರದಿಗಾರರು ಗುತ್ತಿಗೆದಾರ 'ಸುನಿತ ಹೆಗಡೆ'ಯವರಿಗೆ ಕರೆ ಮಾಡಿದಾಗ ಅವರ ಉತ್ತರ ಹೇಗಿತ್ತೆಂದು ನೀವೇ ನೋಡಿ..

ತಮ್ಮ ಜಮೀನಿನಲ್ಲಿ ಅಗಲವಾದ ತಗ್ಗು ತೋಡಿರುವ ಇಂದಿರಮ್ಮ ಕೆರೆಯ ಗುತ್ತಿಗೆದಾರ ಸುನಿತ ಹೆಗಡೆ ಸಣ್ಣ ನೀರಾವರಿ ಇಲಾಖೆಯ ಕೆಲಸಕ್ಕೆ ಅಕ್ರಮ ಕಲ್ಲು, ಮಣ್ಣು ಬಳಸಿದ್ದು ಸುಮಾರು ಒಂದು ಕೋಟಿ ರೂ ಹಾನಿಯಾಗಿದೆ, ಇದಕ್ಕೆ ಧಾರವಾಡ ಸಣ್ಣ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರ ಬೆಂಬಲವಿದೆ ಎಂದಿದ್ದಾರೆ. ಇದನ್ನು ಪ್ರಶ್ನಿಸಲು ಹೋಗಿದ್ದಕ್ಕೆ ಅಲ್ಲಿನ ಸಿಬ್ಬಂದಿ ನನ್ನ ಮೇಲೆ ಹಲ್ಲೆ ಮಾಡಲು ಮುಂದಾಗಿ, ಕೂಡಿ ಹಾಕಿದ್ದರು ಎಂದು ಮೃತ್ಯುಂಜಯ ಯರಗಂಬಳಿಮಠ ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪೊಲೀಸರು ಇದರ ಬಗ್ಗೆ ಗಮನ ಹರಿಸದೆ ಹೋದಲ್ಲಿ ಸಣ್ಣ ನೀರಾವರಿ ಅಧಿಕಾರಿಗಳು ಮತ್ತಷ್ಟು ಖಾಸಗಿ ಜಮೀನಿನ ಮೇಲೆ ತಮ್ಮ ವಕ್ರ ದೃಷ್ಟಿ ಬೀರುವ ಎಲ್ಲ ಸಾಧ್ಯತೆಗಳಿವೆ.

ಮಹಾಂತೇಶ ಪಠಾನಿ

ಪಬ್ಲಿಕ್ ನೆಕ್ಸ್ಟ್ಅಳ್ನಾವರ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/07/2022 04:33 pm

Cinque Terre

113.57 K

Cinque Terre

0

ಸಂಬಂಧಿತ ಸುದ್ದಿ