ಹುಬ್ಬಳ್ಳಿ: ಹೌದು... ಇನ್ನೂ ಮೀಸೆ ಮೂಡದ ಈ ಹುಡುಗ್ರು ಪ್ರೇಮಿಗಳ ಪಾಲಿಗೆ ಕಂಟಕವಾಗಿ ಕಾಡುತ್ತಿದ್ದರು. ಒಂಟಿ ಜೋಡಿಯನ್ನು ಟಾರ್ಗೆಟ್ ಮಾಡಿ ಅವರ ವೀಡಿಯೊ ತೆಗೆದು ಬ್ಲಾಕ್ ಮೇಲ್ ಮಾಡುತಿದ್ದ ಈ ದುಷ್ಕರ್ಮಿಗಳನ್ನು ಗೋಕುಲ್ ರೋಡ್ ಪೊಲೀಸರು ಹೆಡೆಮುರಿ ಕಟ್ಟಿ ʼಕ್ಲಾಸ್ʼ ತಕೊಂಡಿದ್ದಾರೆ.
ರಾಹುಲ್, ಅನಿಲ್, ಕುಮಾರ್, ನಂದೀಶ್, ಅವಿನಾಶ್ ಎಂಬವರೇ ಈಗ ಪೊಲೀಸರಿಗೆ ತಗ್ಲು ಹಾಕ್ಕೊಂಡಿರೋ ಕ್ರಿಮಿನಲ್ಸ್. ಅರೆರೆ... ಏನಪ್ಪಾ ,ಇವರೇನು ಮಾಡಿದ್ರು ? ಇನ್ನೂ ಸಣ್ಣವರಲ್ವಾ? ಅಂತ ಮರುಗುವ ಹಾಗೇ ಇಲ್ಲ! ಯಾಕೆಂದ್ರೆ ಈ ಕ್ರಿಮಿಗಳು ಹುಬ್ಬಳ್ಳಿ ಸುತ್ತ ಮುತ್ತ ಇರುವ ಹೊರವಲಯದ ಏರಿಯಾಗಳಿಗೆ ತೆರಳುವ ಪ್ರೇಮಿಗಳನ್ನು ಬೆದರಿಸುತ್ತಿದರು. ಅವರ ಜೊತೆ ಅಸಹ್ಯವಾಗಿ ವರ್ತಿಸುತ್ತಿದ್ದರು. ಅಲ್ಲದೆ ಮೊಬೈಲ್, ಹಣ ,ಚಿನ್ನ ಇತ್ಯಾದಿ ಕಸಿದು ಪರಾರಿಯಾಗುತ್ತಿದ್ದರು.
ಕೆಲ ದಿನಗಳ ಹಿಂದೆ ದಾರವತಿ ಹನುಮಪ್ಪನ ದರ್ಶನಕ್ಕೆ ತೆರಳಿದ್ದ ಪ್ರೇಮಿಗಳನ್ನು ಇದೇ ಕಿರಾತಕರು ಬೆದರಿಸಿ ಹಣ, ಪರ್ಸ್, ಆಧಾರ್ ಕಾರ್ಡ್ ಎಗರಿಸಿದ್ದರು. ಘಟನೆ ನಂತರ ಗೋಕುಲ್ ರೋಡ್ ಠಾಣೆಗೆ ದೂರು ನೀಡಿದ್ದ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಇನ್ಸ್ ಪೆಕ್ಟರ್ ಕಾಲಿ ಮಿರ್ಚಿ, psi ವಿಶ್ವನಾಥ್, ಸಿಬ್ಬಂದಿ ಎಲ್ .ನಾಯಕ, ನಾಗಭೂಷಣ, ಪೂಜಾರ ನೇತೃತ್ವದಲ್ಲಿ ತಂಡ ರಚಿಸಿ, ಕಾರ್ಯಾಚರಿಸಿ ಶಿವಶಂಕರ ಕಾಲೊನಿಯ ಈ ಐವರು ಲಫಂಗರನ್ನು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.
ಆರೋಪಿಗಳಿಂದ ಬೈಕ್, ಸ್ಕೂಟಿ ಸಹಿತ ಲೂಟಿ ಮಾಡಿದ್ದ ವಸ್ತುಗಳನ್ನು ಪೊಲೀಸರು ವಶ ಪಡಿಸಿದ್ದಾರೆ. ಪ್ರೇಮಿಗಳನ್ನು ಬ್ಲಾಕ್ ಮೇಲ್ ಮಾಡುವುದು ಬಲು ಸುಲಭ ಎಂದುಕೊಂಡವರು ಈಗ ಕಂಬಿ ಎಣಿಸುತ್ತಿದ್ದಾರೆ.
ವರದಿ: ಎಂ.ಕೆ. ನದಾಫ್ ʼಪಬ್ಲಿಕ್ ನೆಕ್ಸ್ಟ್ʼ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/06/2022 04:00 pm