ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಿವೃತ್ತ ಪ್ರಾಧ್ಯಾಪಕರಿಗೆ ಬ್ಲಾಕ್‌ಮೇಲ್; 21 ಲಕ್ಷ ಮಕ್ಮಲ್ ಟೋಪಿ ಹಾಕಿದ ವಂಚಕಿ...!

ಹುಬ್ಬಳ್ಳಿ: ನಿವೃತ್ತ ಪ್ರಾಧ್ಯಾಪಕರೊಬ್ಬರ ಜೊತೆ ಸಲುಗೆ ಬೆಳೆಸಿಕೊಂಡ ಮಹಿಳೆಯೊಬ್ಬಳು, ಅವರ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್‌ಮೇಲ್ ಮಾಡಿ, ಬರೋಬ್ಬರಿ 21 ಲಕ್ಷ ದೋಚಿದ್ದಾಳೆ.

ಅಂಜಲಿ ಶರ್ಮಾ ಎಂಬಾಕೆ ಧಾರವಾಡದ ಆ ಪ್ರಾಧ್ಯಾಪಕರಿಗೆ ವಾಟ್ಸ್‌ಆ್ಯಪ್ ವಿಡಿಯೊ ಕರೆ ಮೂಲಕ ಪರಿಚಯವಾಗಿದ್ದಳು. ಸ್ನೇಹ ಸಲುಗೆಗೆ ತಿರುಗಿತ್ತು. ವಾಟ್ಸ್‌ಆ್ಯಪ್‌ನಲ್ಲಿ ಇಬ್ಬರೂ ತಮ್ಮ ಖಾಸಗಿ ವಿಡಿಯೊ ಹಾಗೂ ಫೋಟೊಗಳನ್ನು ವಿನಿಮಯ ಮಾಡಿಕೊಂಡಿದ್ದರು. ವಿಡಿಯೊ ಕಾಲ್‌ನಲ್ಲಿಯೂ ಮಾತನಾಡಿದ್ದರು.

ಕೆಲ ದಿನಗಳ ನಂತರ ಅಂಜಲಿ ಪ್ರಾಧ್ಯಾಪಾಕರ ಖಾಸಗಿ ವಿಡಿಯೊ, ಫೋಟೊ, ವಿಡಿಯೊ ಕರೆಯ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿ 3 ಲಕ್ಷ ನೀಡುವಂತೆ ಬ್ಲಾಕ್‌ಮೇಲ್ ಮಾಡಿದ್ದಾಳೆ. ನಂತರ, ಆಕೆಯ ಸಹಚರ ವಿಕ್ರಮ್ ಎಂಬಾತ ತಾನು ಸೈಬರ್ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಪ್ರಾಧ್ಯಾಪಕರಿಗೆ ಕರೆ ಮಾಡಿದ್ದಾನೆ.

ನಿಮಗೆ ಬ್ಲಾಕ್‌ಮೇಲ್ ಮಾಡಿರುವ ಅಂಜಲಿ ನನಗೆ ಪರಿಚಯವಿದ್ದು, ನಿಮ್ಮ ಫೋಟೊ ಮತ್ತು ವಿಡಿಯೊಗಳನ್ನು ಡೆಲಿಟ್ ಮಾಡಿಸುತ್ತೇನೆ. ಅದಕ್ಕಾಗಿ, ನನಗೆ 5 ಲಕ್ಷ ಕೊಡಬೇಕು ಎಂದಿದ್ದಾನೆ. ಪ್ರಾಧ್ಯಾಪಕರ ಬ್ಯಾಂಕ್ ಖಾತೆಯ ವಿವರ ಪಡೆದು, ಆನ್‌ಲೈನ್‌ನಲ್ಲಿ ಹಂತಹಂತವಾಗಿ 21 ಲಕ್ಷವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Abhishek Kamoji
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/10/2022 01:02 pm

Cinque Terre

177 K

Cinque Terre

0

ಸಂಬಂಧಿತ ಸುದ್ದಿ