ಧಾರವಾಡ: ಧಾರವಾಡದ ತಹಶೀಲ್ದಾರ ಕಚೇರಿ ಬಳಿ ಇರುವ ದೇಶಪಾಂಡೆ ಅರ್ಜಿ ಬರಹಗಾರರು ನಕಲಿ ನೋಟರಿ ಹಾಗೂ ಬಾಂಡ್ ಪೇಪರ್‌ಗಳಿಗೆ ವಕೀಲರ ಸಹಿಗಳನ್ನು ತಾವೇ ಮಾಡುತ್ತಿದ್ದಾರೆ ಎಂಬ ದೂರು ವಕೀಲರ ಸಂಘಕ್ಕೆ ಕೇಳಿ ಬಂದ ಹಿನ್ನೆಲೆಯಲ್ಲಿ ವಕೀಲರು ದೇಶಪಾಂಡೆ ಅವರ ಅಂಗಡಿ ಮೇಲೆ ದಾಳಿ ನಡೆಸಿದರು.
ಹಲವಾರು ವರ್ಷಗಳಿಂದ ದೇಶಪಾಂಡೆ ಅವರು, ಧಾರವಾಡ ತಹಶೀಲ್ದಾರ ಕಚೇರಿ ಬಳಿ ಅರ್ಜಿಗಳ ಅಂಗಡಿ ಹಾಕಿಕೊಂಡು ತಹಶೀಲ್ದಾರ ಕಚೇರಿಗೆ ಬರುವ ಸಾರ್ವಜನಿಕರಿಗೆ ಬಾಂಡ್ ಪೇಪರ್, ವಾರಸಾ ಪ್ರಮಾಣಪತ್ರ ಸೇರಿದಂತೆ ಇತ್ಯಾದಿ ಅರ್ಜಿಗಳನ್ನು ಪೂರೈಕೆ ಮಾಡುತ್ತ ಬಂದಿದ್ದಾರೆ.
ಆದರೆ, ಇವರು ಬಾಂಡ್ ಪೇಪರ್‌ಗಳಿಗೆ ತಾವೇ ನೋಟರಿ ಮಾಡಿ, ಅವುಗಳಿಗೆ ತಾವೇ ಸಹಿ ಮಾಡಿ ವಕೀಲರ ಸಹಿ ಎಂದು ನಂಬಿಸಿ ಮೋಸ ಮಾಡುತ್ತಿದ್ದಾರೆ ಎಂಬ ದೂರು ವಕೀಲರ ಸಂಘಕ್ಕೆ ಬಂದಿದ್ದರಿಂದ ಇಂದು ಸುಮಾರು 15 ರಿಂದ 20 ಜನ ವಕೀಲರು ದೇಶಪಾಂಡೆ ಅವರ ಅಂಗಡಿ ಮೇಲೆ ದಾಳಿ ಮಾಡಿ ಅನೇಕ ಬಾಂಡ್ ಪೇಪರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ನಂತರ ಅಂಗಡಿ ಮಾಲೀಕರನ್ನು ವಕೀಲರು ಬಾಂಡ್ ಪೇಪರ್ ಸಮೇತ ತಹಶೀಲ್ದಾರರ ಮುಂದೆ ಹಾಜರುಪಡಿಸಿ ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Kshetra Samachara
14/09/2022 06:56 pm