ಧಾರವಾಡ: ಜಿಲ್ಲೆಯಲ್ಲಿ ಮಕ್ಕಳನ್ನು ಕಳ್ಳತನ ಮಾಡಿ ಕೊಲೆ ಗೈಯಲಾಗುತ್ತಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ನಿಜವಾದ ಅಲೆಮಾರಿ ಜೀವಿಗಳಿಗೆ ಸಾರ್ವಜನಿಕರಿಂದ ಕಂಟಕ ಶುರುವಾಗಿದೆ.
ಹೌದು, ಕಳೆದ ವಾರದಿಂದ ಉತ್ತರ ಪ್ರದೇಶ, ಬಿಹಾರ ರಾಜ್ಯ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕೆಲವು ದುಷ್ಕರ್ಮಿಗಳು ಶಾಲೆಗೆ ಹೋದ ಮಕ್ಕಳನ್ನು ಅಲೆಮಾರಿ, ಜೋತಿಷ್ಯ, ಬುಡು ಬುಡಿಕ್ಯಾರ ವೇಷದಲ್ಲಿ ಅಪಹರಿಸಿ ಮನಬಂದಂತೆ ಮಕ್ಕಳನ್ನು ಕೊಂದು ಹಾಕಿ ಕಿಡ್ನಿ, ಕಣ್ಣು ಸೇರಿದಂತೆ ಇನ್ನಿತರ ಅಂಗಾಂಗ ಕದ್ದು ಪರಾರಿಯಾಗುತ್ತಿದ್ದರು. ಈ ಬಗ್ಗೆ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಕಳ್ಳರು ಧಾರವಾಡ ಜಿಲ್ಲೆಗೂ ಬಂದಿದ್ದಾರೆ ಎಂದು ಧಾರವಾಡ ಜಿಲ್ಲೆ ಆತಂಕಗೊಂಡಿದ್ದರು.
ಈ ಸುದ್ದಿ ಜಿಲ್ಲೆಯಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಪ್ಲಾಟಿನಲ್ಲಿ ಜೋತಿಷ್ಯ ಹೇಳಲು ಹೋದರವರಿಗೆ ಮಕ್ಕಳ ಕಳ್ಳರು ಎಂದು ಹಲ್ಲೆ ಮಾಡಿ ಅಣ್ಣಿಗೇರಿ ಪೋಲಿಸರಿಗೆ ಒಪ್ಪಿಸಿದ್ದಾರೆ. ಆನಂತರ ಪೋಲಿಸರು ವಿಚಾರಣೆ ನಡೆಸಿದಾಗ ಅಲೆಮಾರಿಗಳು ಹೊಟ್ಟೆ ಪಾಡಿಗಾಗಿ ಗ್ರಾಮಕ್ಕೆ ಬಂದಿರುವುದು ಗೊತ್ತಾಗಿದೆ.
ಈ ಕುರಿತು ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೊಕೇಶ ಜಗಲಾಸುರ ಮಾತನಾಡಿ ಈ ರೀತಿಯಾದ ಸುಳ್ಳು ಸುದ್ದಿಗೆ ಧಾರವಾಡ ಜಿಲ್ಲೆಯ ಜನ ಹೆದರುವ ಅಗತ್ಯವಿಲ್ಲ. ನಿಮಗೆ ಸಂಶಯ ಇದ್ದಲ್ಲಿ 112 ಮುಖಾಂತರ ಮಾಹಿತಿಯನ್ನು ಕೊಡಿ, ಯಾರು ಕೂಡಾ ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/09/2022 07:56 pm