ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಬೈಕ್ ಸವಾರರಿಗೆ ವಿಭಿನ್ನವಾಗಿ ಜಾಗೃತಿ ಮೂಡಿಸಿದ ಸಿಪಿಐ ಶ್ರೀಶೈಲ ಕೌಜಲಗಿ

ಕಲಘಟಗಿ: ಪಟ್ಟಣದಲ್ಲಿ ನಿನ್ನೆ ರಾತ್ರಿ ಬೈಕ್ ಓಡಿಸುತ್ತಿದ್ದ ಮಕ್ಕಳು ಹಾಗೂ ಕುಡಿದು ಬೈಕ್ ರೈಡ್‌ ಮಾಡುತ್ತಿದ್ದ ಸವಾರರನ್ನು ತಡೆದು ಸುಮಾರು 50ಕ್ಕೂ ಹೆಚ್ಚು ಬೈಕ್ ಹಾಗೂ ಸವಾರರನ್ನು ಪೋಲಿಸ್ ಠಾಣೆಯಲ್ಲಿ ಕರೆತರಲಾಯಿತ್ತು. ನಂತರ ಎಲ್ಲರನ್ನೂ ಸೇರಿಸಿ ಅವರ ಪಾಲಕರನ್ನು ಕರೆಯಿಸಿ 18 ವಯಸ್ಸಿನ ಒಳಗಿರುವ ಯುವಕರಿಗೆ ಲೈಸನ್ಸ್ ಇಲ್ಲದೆ ವಾಹನ ಚಲಾಯಿಸಲು ನೀಡಬಾರದು ಎಂದು ಸಿಪಿಐ ಶ್ರೀಶೈಲ ಕೌಜಲಗಿ ಅವರು ಪಾಲಕರಿಗೆ ತಿಳಿಸಿದರು. ಅದೇ ರೀತಿ ಮಹಿಳಾ ಪಿಎಸ್ಐ ಉಮಾದೇವಿ ಅವರು ಎಲ್ಲ ಯುವಕರಿಗೆ ಅಪಘಾತಗಳ ಹಾಗೂ ಕಾನೂನಗಳ ಬಗ್ಗೆ ಅರಿವು ಮೂಡಿಸಿದರು. ನಂತರ ಎಲ್ಲರಿಗೂ ಅವರವರ ಬೈಕ್‌ಗಳನ್ನು ನೀಡಿ ಮರಳಿ ಕಳಿಸಿದರು.

ವಿಭಿನ್ನವಾಗಿ ಜಾಗೃತಿ ಮೂಡಿಸಿದ ಸಿಪಿಐ ಶ್ರೀಶೈಲ ಕೌಜಲಗಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ: ಉದಯ ಗೌಡರ

Edited By : Manjunath H D
Kshetra Samachara

Kshetra Samachara

17/08/2022 11:50 am

Cinque Terre

54.33 K

Cinque Terre

3

ಸಂಬಂಧಿತ ಸುದ್ದಿ