ಹುಬ್ಬಳ್ಳಿ: ನಿನ್ನೆ ದಿನದಂದು ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ, ಇಂದು ಅಂತ್ಯಕ್ರಿಯೆ ಜರುಗಲಿದೆ. ಅದೇ ರೀತಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರ ಮುಂದೆ ಗುರೂಜಿ ಅವರ ಸಂಬಂಧಿಕರು, ಸ್ನೇಹಿತರು ಹಲವಾರು ಭಾಗಗಳಿಂದ ಆಗಮಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ನಡೆಯಲಿರುವ ಗುರೂಜಿ ಅಂತ್ಯಕ್ರಿಯೆ ಹಿನ್ನಲೆಯಲ್ಲಿ ಶಿವಮೊಗ್ಗ ಹಾಗೂ ಬೆಂಗಳೂರು ಸೇರಿದಂತೆ ಹಲವು ಭಾಗದಿಂದ ಸಂಬಂಧಿಕರು ಬಂದಿದ್ದಾರೆ. ಗುರೂಜಿ ಅವರನ್ನು ಹತ್ಯೆ ಮಾಡಿರುವುದು ದೊಡ್ಡ ದುರಂತ. ಅವರ ಉದ್ಯೋಗಿಗಳೇ ಅವರನ್ನ ಹತ್ಯೆ ಮಾಡಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ದುಷ್ಕರ್ಮಿಗಳು ಉಂಡ ಮನೆಗೆ ಕನ್ನ ಹಾಕಿದ್ದಾರೆ.
ಸಾವಿರಾರು ಕುಟುಂಬಗಳಿಗೆ ಗುರೂಜಿ ದಾರಿದೀಪವಾಗಿದ್ದರು. ನಮ್ಮ ಜೊತೆ ಸಾಕಷ್ಟು ಅವಿನಾಭಾವ ಒಡನಾಟ ಹೊಂದಿದ್ದರು. ಅವರನ್ನು ಹತ್ಯೆ ಮಾಡಿರುವುದು ದೊಡ್ಡ ದುರಂತ. ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಚಂದ್ರಶೇಖರ ಗುರೂಜಿ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/07/2022 10:33 am