ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಾಡಹಗಲೇ ನಡೆಯಿತು ಕಗ್ಗೊಲೆ: ಏನು ತಿಳಿಯುತ್ತಿಲ್ಲ ಅವಳಿನಗರದ ಕ್ರೈಂಗಳ ಹಾವಳಿ.!

ಹುಬ್ಬಳ್ಳಿ: ಆತ ಇಡೀ ರಾಜ್ಯಕ್ಕೆ ಹೆಸರಾಂತ ಜ್ಯೋತಿಷಿ. ಆತನ ಬಳಿ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸಿ ತಮ್ಮ ಕಷ್ಟ ನಿವಾರಣೆ ಮಾಡುವಂತೆ ಕೇಳಿಕೊಳ್ಳುತ್ತಾರೆ. ಆದರೆ ಇಂದು ಅದೇ ಭಕ್ತರ ಸೋಗಿನಲ್ಲಿ ಬಂದ ಹಂತಕರು ಗುರೂಜಿಯ ಹತ್ಯೆ ನಡೆಸಿ ಪರಾರಿಯಾಗಿದ್ದಾರೆ. ಅಲ್ಲಿದ್ದವರು ಒಂದು ಕ್ಷಣ ನಿಬ್ಬೆರಗಾಗಿದ್ದಾರೆ. ಹಾಗಾದರೆ ಹೇಗಿತ್ತು ಆ ಭೀಕರ ಕೊಲೆ ಅಂತೀರಾ ಈ ಸ್ಟೋರಿ ನೋಡಿ.

ನೋಡ ನೋಡುತ್ತಿದ್ದಂತೆ ಗೂರೂಜಿಗಳ ಹತ್ಯೆ ನಡೆದೇ ಹೋಯಿತು. ಕೊಲೆಯನ್ನು ನೋಡಿದ ಜನರು ಭಯದಿಂದ ಚೀರುತ್ತಾ ಓಡಿ ಹೋಗಿದ್ದಾರೆ. ಅಷ್ಟೇ ಭೀಕರತೆಯಿಂದ ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ನಡೆದು ಹೋಯಿತು. ಹುಬ್ಬಳ್ಳಿಯ ಉಣಕಲ್ ನಲ್ಲಿರುವ ಪ್ರಸಿಡೆಂಟ್ ಹೋಟೆಲ್‌ನಲ್ಲಿ ಬೆಳಗ್ಗೆ 12-30ರ ಸುಮಾರಿಗೆ ಇಬ್ಬರು ಹಂತಕರು ಭಕ್ತರ ಸೋಗಿನಲ್ಲಿ ಬಂದಿದ್ದಾರೆ. ಅದರಲ್ಲಿ ಒಬ್ಬ ಹಂತಕ ಚಂದ್ರಶೇಖರ್ ಗುರೂಜಿಗಳ ಕಾಲಿಗೆ ನಮಸ್ಕರಿಸಿದ್ದಾನೆ.

ಅದೇ ಸಮಯ ಕಾಯುತ್ತಿದ್ದ ಮತ್ತೊಬ್ಬ ಹಂತಕ ಚಾಕುವಿನಿಂದ ಚಂದ್ರಶೇಖರ್ ಗುರೂಜಿಗಳ ಎದೆಯ ಭಾಗಕ್ಕೆ ಚುಚ್ಚಿದ್ದಾನೆ.‌ ನಂತರ ಇಬ್ಬರು ಹಂತಕರು ಸೇರಿ ಕೆಲವೇ ಕ್ಷಣದಲ್ಲಿ 60ಕ್ಕೂ ಹೆಚ್ಚು ಕಡೆ ಚುಚ್ವಿ ಇಬ್ಬರು ಹಂತಕರು ಪರಾರಿಯಾಗಿದ್ದರು. ಹಂತಕರು ಮಾಡಿದ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗುರೂಜಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕಿಮ್ಸ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಗುರೂಜಿ ಹತ್ಯೆಯ ಆರೋಪಿ ಮಹಾಂತೇಶ್ ಶಿರೂರ್ ಹಾಗೂ ಮಂಜುನಾಥ ಎಂಬುವಂತ ಮಾಹಿತಿ ಲಭ್ಯವಾಗಿದ್ದೆ ತಡ ಪೋಲಿಸರು ಅಲರ್ಟ್ ಆಗಿ ಬಂಧಿಸಿಯೇ ಬಿಟ್ಟಿದ್ದಾರೆ.

ಈಗಾಗಲೇ ಗುರೂಜಿಯ ಶವದ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್‌ಗೆ ರವಾನಿಸಲಾಗಿದೆ. ಮೂಲತಃ ಬಾಗಲಕೋಟೆಯವರಾದ ಚಂದ್ರಶೇಖರ್ ಗುರೂಜಿ ಹುಬ್ಬಳ್ಳಿ ವಿದ್ಯಾನಗದಲ್ಲಿ ವಾಸವಾಗಿದ್ದರು. ವಾಸ್ತು ಕುರಿತು ಸಲಹೆ, ಸೂಚನೆ ನೀಡಲು ಜುಲೈ 3ರಂದು ಪ್ರೆಸಿಡೆಂಟ್ ಹೋಟೆಲ್‌ನ ಕೊಠಡಿ ನಂ. 220 ರಲ್ಲಿ ವಾಸವಾಗಿದ್ದರು. ಬುಧವಾರ ಕೊಠಡಿ ತೆರವುಗೊಳಿಸುವುದಾಗಿ ಹೇಳಿದ್ದರು.

ಹೋಟೆಲ್‌ಗೆ ಬಂದಿದ್ದ ದುಷ್ಕರ್ಮಿಗಳು ಗುರೂಜಿಗೆ ದೂರವಾಣಿ ಕರೆ ಮಾಡಿ, ಸ್ವಾಗತಕಾರರ ಕೌಂಟರ್‌ನಲ್ಲಿ ಕಾಯುತ್ತಿರುವುದಾಗಿ ತಿಳಿಸಿದ್ದರು ಎಂದು ಹೋಟೆಲ್ ಸಿಬ್ಬಂದಿ ಹೇಳಿದರು. ಸ್ವಾಗತಕಾರರ ಕೌಂಟರ್‌ಗೆ ಬಂದ ಗುರೂಜಿ, ದುಷ್ಕರ್ಮಿಗಳ ಬಳಿ ಕೂತು ಕುಷಲೋಪರಿ ವಿಚಾರಿಸಿದ್ದಾರೆ. ಅವರಲ್ಲಿ ಒಬ್ಬ ಗುರೂಜಿ ಕಾಲಿಗೆ ನಮಸ್ಕರಿಸಿದ ಹಾಗೆ ಮಾಡಿದ್ದಾನೆ. ಅದೇ ವೇಳೆ ಮತ್ತೊಬ್ಬ ಚಾಕುವಿನಿಂದ ಇರಿದಿದ್ದಾನೆ. ಹತ್ಯೆ ಕೃತ್ಯ ನಡೆಯುತ್ತಿದ್ದಂತೆ ಸಿಬ್ಬಂದಿ ಭಯದಿಂದ ಹೊರಗೆ ಓಡಿ ಬಂದಿದ್ದಾರೆ. ಈ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಸ್ತಿ ವಿಚಾರಕ್ಕಾಗಿಯೇ ಕೊಲೆ ಮಾಡಿರುವುದಾಗಿ ಬಹುತೇಕ ಕಚಿತವಾಗಿದ್ದು, ಪೊಲೀಸ್ ತನಿಖೆಯಿಂದಲೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.

ಒಟ್ಟಿನಲ್ಲಿ ಹತ್ಯೆ ಮಾಡಿದ ಬಳಿಕ ಪರಾರಿಯಾಗಿದ್ದ ಹಂತಕರನ್ನು ಕರೆತಂದು ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಹತ್ಯೆಯ ಹಿಂದಿನ ನಿಜವಾದ ರಹಸ್ಯ ಹೊರ ತೆಗೆಯಲು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/07/2022 10:00 pm

Cinque Terre

167.48 K

Cinque Terre

2

ಸಂಬಂಧಿತ ಸುದ್ದಿ