ಹುಬ್ಬಳ್ಳಿ: ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ಗೋಕುಲ್ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನದ ಘಟನೆ ನಡೆದಿತ್ತು. ಪ್ರತಿಷ್ಠಿತ ಹೋಟೆಲ್ ಒಂದರ ಮುಂದೆ ರಾಜಾರೋಷವಾಗಿ ಕಳ್ಳನೊಬ್ಬ ಚೈನ್ ಕಸಿದು ಪರಾರಿ ಆಗಿದ್ದ. ಪ್ರಕರಣದ ಜಾಡು ಬೆನ್ನತ್ತಿದ ಗೋಕುಲ್ ರೋಡ್ ಇನ್ಸ್ ಪೆಕ್ಟರ್ ಕಾಲಿ ಮಿರ್ಚಿ ಮತ್ತವರ ತಂಡ ಇದೀಗ ಖತರ್ನಾಕ್ ಕಳ್ಳನ ಹೆಡೆಮುರಿ ಕಟ್ಟಿ ಒಂದು ಕೇಸ್ ಜೊತೆಗೆ 5 ಪ್ರಕರಣ ಪತ್ತೆ ಹಚ್ಚಿದ್ದಾರೆ.
ಪಿಎಸ್ ಐ ಮತ್ತವರ ತಂಡ ಸಿಸಿಟಿವಿ ಜಾಲಾಡಿದಾಗ ಆರೋಪಿ ದೀಪು ದಾಪಳೆ ಬೈಕ್ ನಲ್ಲಿ ಬಂದು ಚೈನ್ ಎಗರಿಸಿ ಕಾರಿನಲ್ಲಿ ಎಸ್ಕೇಪ್ ಆಗಿರುವ ದೃಶ್ಯ ಕಂಡಿದೆ. ಬೈಕ್ ನಲ್ಲಿ ಕೋಟಿಲಿಂಗ ನಗರಕ್ಕೆ ಹೋಗಿದ್ದ ದೀಪು ದಾಪಳೆ ಅಲ್ಲಿಂದ ಕೆಂಪು ಕಾರಿನಲ್ಲಿ ಎಸ್ಕೇಪ್ ಆಗಿದ್ದ. ಆ ಕಾರನ್ನು ಬೆನ್ನು ಹತ್ತಿದಾಗ ಕ್ರೈಂ ಸಿಬ್ಬಂದಿಗೆ ಕಳ್ಳನ ಸಂಪೂರ್ಣ ಮಾಹಿತಿ ಸಿಕ್ಕಿದೆ. ನಂತರ ಬೆಳಗಾವಿಯಲ್ಲಿರುವ ಕಳ್ಳನ ಮನೆಗೆ ಹೋದ ಪೊಲೀಸರಿಗೆ 2 ದಿನದ ನಂತರ ಕಳ್ಳ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇದೇ ವೇಳೆ ಇಸ್ಪೀಟ್ ಆಟದ ಸಲುವಾಗಿ ಕಳ್ಳತನಕ್ಕೆ ಇಳಿದಿದ್ದೆ ಅಂತ ಪೊಲೀಸರ ಬಳಿ ಹೇಳಿದ್ದಾನೆ.
ಆರೋಪಿ ದೀಪು ದಾಪಾಳೆ ಮೂರು ವರ್ಷಗಳ ಹಿಂದೆ ಕ್ರೈಂ ನಲ್ಲಿ ಭಾಗಿಯಾಗಿ ಅಳ್ನಾವರ ಪೊಲೀಸರು ಶೂಟ್ ಮಾಡಿದಾಗ ಕಿಡ್ನಿ ಒಂದನ್ನ ಕಳೆದುಕೊಂಡಿದ್ದಾನೆ. ಆದ್ರೂ ಕೂಡಾ ಈತ ತನ್ನ ಚಾಳಿ ಬಿಟ್ಟಿರಲಿಲ್ಲ. ಸದ್ಯ ಗೋಕುಲ್ ಪೊಲೀಸ್ ಸ್ಟೇಷನ್ನಲ್ಲಿ ಬಂಧಿಯಾಗಿದ್ದಾನೆ.
ಎಂ.ಕೆ. ನದಾಫ್, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
29/06/2022 03:13 pm