ಧಾರವಾಡ: ಬಾಗಲಕೋಟೆ ಆರ್‌ಟಿಓ ಇನ್‌ಸ್ಪೆಕ್ಟರ್ ಯಲ್ಲಪ್ಪ ಪಡಸಾಲೆ ಅವರ ಧಾರವಾಡದ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಚಿನ್ನದ ವಸ್ತುಗಳು ಹಾಗೂ ನೋಟಿನ ಕಂತೆಗಳು ಪತ್ತೆಯಾಗಿವೆ.
ಯಲ್ಲಪ್ಪ ಪಡಸಾಲೆ ಅವರು ಬಾಗಲಕೋಟೆಯಲ್ಲಿ ಆರ್‌ಟಿಓ ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಧಾರವಾಡದ ಲಕಮನಹಳ್ಳಿಯಲ್ಲಿ ಐಷಾರಾಮಿ ಮನೆ ಹೊಂದಿದ್ದು, ಇಂದು ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ಇನ್‌ಸ್ಪೆಕ್ಟರ್ ಯಲ್ಲಪ್ಪ ಅವರಿಗೆ ಶಾಕ್ ನೀಡಿದ್ದಾರೆ.
ದಾಳಿ ವೇಳೆ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳು ಸೇರಿದಂತೆ ನೋಟಿನ ಕಂತೆಗಳು ಲಭ್ಯವಾಗಿವೆ. ಎಸಿಬಿ ಅಧಿಕಾರಿಗಳು ಸಂಜೆವರೆಗೂ ಪಡಸಾಲೆ ಅವರ ಮನೆಯಲ್ಲಿ ಶೋಧ ನಡೆಸಿ, ವಿವಿಧ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದರು. ಪಡಸಾಲೆ ಅವರ ಮನೆಯಲ್ಲಿ ಪತ್ತೆಯಾದ ಚಿನ್ನ ಹಾಗೂ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/06/2022 09:45 pm