ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗು ಕಳ್ಳತನ ಪ್ರಕರಣ ಭೇದಿಸಲು ಖಾಕಿ ಮಾಸ್ಟರ್ ಪ್ಲ್ಯಾನ್: ಕಮೀಷನರ್ ಸ್ಪೆಷಲ್ ಪೋರ್ಸ್ ರೆಡಿ

ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ನಲ್ಲಿ ನಡೆದ ಮಗು ಕಳ್ಳತನ ಕೇಸ್ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಕಿಡ್ನ್ಯಾಪ್ ಆಗಿದ್ದ ಮಗು ಆಸ್ಪತ್ರೆಯಲ್ಲಿಯೇ ಪತ್ತೆಯಾಗಿ ಇಡೀ ಕೇಸ್ ಗೆ ಟ್ವಿಸ್ಟ್ ನೀಡಿತ್ತು.

ಆದರೀಗ ಮಗು ಕಿಡ್ನ್ಯಾಪ್ ಮಾಡಿದ್ಯಾರು ಎಂದು ಖಾಕಿ ಶೋಧಿಸಿದರೇ ಭಯಾನಕ ಸತ್ಯ ಬಯಲಾಗಿದ್ದು, ಖಾಕಿ ಮತ್ತಷ್ಟು ಆಯಾಮದಲ್ಲಿ ತನಿಖೆಗೆ ಮುಂದಾಗಿದೆ.

ಹೌದು...ಪೊಲೀಸರಿಗೆ ಇಲ್ಲಿಯವರೆಗ ಸಿಕ್ಕಿರುವ ಸಾಕ್ಷಿ ಪ್ರಕಾರ, ತಾಯಿಯತ್ತಲೇ ಪ್ರಕರಣ ತಿರುಗುತ್ತಿದೆ. ಆದರೆ ತಾಯಿ ಸಲ್ಮಾ ಮಾತ್ರ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗೇ ಸದ್ಯ ಖಾಕಿ ಟೀಂ ಕೂಡಾ ಮತ್ತಷ್ಟು ಸಾಕ್ಷ್ಯ ಸಂಗ್ರಹಿಸುವ ಕೆಲಸಕ್ಕೆ ಕೈ ಹಾಕಿದೆ. ಕುಂದಗೋಳ ಮೂಲದ ಸಲ್ಮಾ ಶೇಖ್ ದಂಪತಿ ಕಳೆದ ಹಲವಾರು ದಿನಗಳಿಂದ ಮಗುವನ್ನ ಕಿಮ್ಸ್ ನಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದರು. ಆದರೆ ಮಗುವಿಗೆ ಗಂಭೀರ ಆರೋಗ್ಯ ಸಮಸ್ಯೆ ಇದೆ ಎನ್ನುವುದು ಗೊತ್ತಾಗಿತ್ತು. ಅಲ್ಲದೇ ಸಲ್ಮಾಗೆ ಈಗಾಗಲೇ ಎರಡೂ ಮಕ್ಕಳು ಫೇಲ್ ಆಗಿದ್ದವಂತೆ. ಹೀಗಾಗಿ ಈ ಮಗು ಕೂಡಾ ಆರೋಗ್ಯ ಸಮಸ್ಯೆ ಹಿನ್ನಲೆ ಮಗುವನ್ನು ಆಕೆಯೇ ಬೇರೆಯವರಿಗೆ ಕೊಟ್ಟು ನಾಟಕವಾಡಿದ್ಳಾ ಎನ್ನುವ ಪ್ರಶ್ನೆ ಮೂಡಿದೆ.

ಇನ್ನೂ ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ ತಾಯಿಯೇ ಪ್ರಕರಣ ರೂವಾರಿ ಎನ್ನಲಾಗುತ್ತಿದೆ. ಆದರೆ ಮಗುವನ್ನು ತಾಯಿಯಿಂದ ತೆಗೆದುಕೊಂಡು ಹೋಗಿದ್ಯಾರು,ಮತ್ತೆ ವಾಪಸ್ ಕಿಮ್ಸ್ ಗೆ ಕರೆತಂದಿದ್ಯಾರು ಎನ್ನುವ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸದ್ಯ ತನ್ನ ಕುಟುಂಬದ ಸಮಸ್ಯೆಗೆ ಮಗುವನ್ನು ಕಿಡ್ನ್ಯಾಪ್ ಮಾಡಿಸಿ ಕಿಮ್ಸ್ ಗೆ ಕೆಟ್ಟ ಹೆಸರು ತರಲು ಈ ಮಹಾನ್ ತಾಯಿ ಮಾಡಿದ ಸಂಚು ವಿಫಲವಾಗಿದೆ. ಅದೇ ಏನೇ ಇರಲಿ ಹೆತ್ತ ಕರುಳ ಬಳ್ಳಿಯನ್ನು ಕಿಡ್ನ್ಯಾಪ್ ಮಾಡಿಸಿ ನಾನೇನು ಮಾಡೇ ಇಲ್ಲ ಎನ್ನುತ್ತಿದ್ದವಳಿಗೆ ಏನ ಅನಬೇಕು ನೀವೆ ಹೇಳಿ.

Edited By : Somashekar
Kshetra Samachara

Kshetra Samachara

16/06/2022 08:24 pm

Cinque Terre

54.56 K

Cinque Terre

6

ಸಂಬಂಧಿತ ಸುದ್ದಿ