ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ವಸತಿಗೃಹದಲ್ಲಿ ನಡೆದ ಸರಣಿ ಕಳ್ಳತನ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಾವಳಿ 'ಪಬ್ಲಿಕ್ ನೆಕ್ಸ್ಟ್'ಗೆ ಲಭ್ಯವಾಗಿದೆ.
ಹೌದು... ಕಿಮ್ಸ್ ವಸತಿಗೃಹದ 4 ಮನೆಗಳಲ್ಲಿ ಕಳ್ಳತನವಾಗಿದ್ದು, ಚಿನ್ನಾಭರಣ- ನಗದು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಖದೀಮರು ದೋಚಿದ್ದಾರೆ.
ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡಿದ ಕಳ್ಳರು ಬೀಗ ಮುರಿದು ಒಳನುಗ್ಗಿ ಕಳ್ಳತನ ಮಾಡಿದ್ದು, ನಾಲ್ವರು ಕಳ್ಳರಿಂದ ಈ ಕೃತ್ಯ ನಡೆದಿದೆ. ಕಳ್ಳರು ವಸತಿಗೃಹಕ್ಕೆ ನುಗ್ಗಿ ಮನೆಗಳನ್ನು ಚೆಕ್ ಮಾಡ್ತಿರೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಎರಡು ತಿಂಗಳ ಹಿಂದೆಯೂ ಇದೇ ವಸತಿಗೃಹದಲ್ಲಿ ಕಳ್ಳತನ ನಡೆದಿದ್ದು, ಪದೇ ಪದೆ ಕಳ್ಳತನ ಪ್ರಕರಣ ನಡೆಯುತ್ತಲೇ ಇವೆ. ಆದರೆ, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಈಗಲಾದರೂ ಕಳ್ಳರನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿದ್ದಾರೆ.
Kshetra Samachara
13/06/2022 12:52 pm