ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಈ ರಸ್ತೆಯಲ್ಲಿ ಹೋದ್ರೆ ಮೈಮೂಳೆ ಮುರಿಯೋದು ಪಕ್ಕಾ: ಮುಖ್ಯರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರ

ಹುಬ್ಬಳ್ಳಿ: ಇದು ಇತಿಹಾಸ ಸೃಷ್ಟಿಸಿದ ರಸ್ತೆ. ಅಷ್ಟೇ ಅಲ್ಲದೇ ನ್ಯಾಯಾಲಯಕ್ಕೆ ಹೋಗುವ ಮುಖ್ಯ ರಸ್ತೆಯೂ ಹೌದು. ಆದ್ರೆ ಈ ರಸ್ತೆಯ ಅವ್ಯವಸ್ಥೆ ಕಂಡು ಇಲ್ಲಿನ ಜನ ಬೇಸತ್ತು ಹೋಗಿದ್ದಾರೆ.

ಹೌದು…. ಹೀಗೆ ಬೈಕ್ ನಲ್ಲೇ ಹೋಗುತ್ತಿದ್ರೆ ರಸ್ತೆ ಎಲ್ಲಿದೆ ಅಂತ ಹುಡುಕಬೇಕು. ಇದು ನಗರದ ವಾರ್ಡ್ ನಂಬರ್ 45 ರಲ್ಲಿ ಬರುವ ತಿಮ್ಮಸಾಗರ ಗುಡಿಯಲ್ಲಿ ಕಂಡು ಬಂದ ದೃಶ್ಯಗಳು. ಈ ರಸ್ತೆ ಹೊಸ ಕೋರ್ಟ್‌ಗೆ ಹೋಗುತ್ತದೆ. ಇಲ್ಲಿ ದಿನನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಆದ್ರೆ ರಸ್ತೆ ಹುಡುಕಿ ಚಲಿಸುವಂತಹ ಪರಿಸ್ಥಿತಿ ಎದುರಾಗಿದೆ. ಇನ್ನು ಈ ರಸ್ತೆಗೆ ಸುಮಾರು 40 ಲಕ್ಷ ರೂ. ಅನುದಾನ ಬಂದಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅನುದಾನ ಬಿಡುಗಡೆ ಮಾಡಿದ್ದಾರಂತೆ. ಆದ್ರೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ.

ಈ ರಸ್ತೆಯನ್ನು ಅಗೆದು ಸುಮಾರು ಎರಡು ವರ್ಷಗಳೇ ಆಗಿದೆ. ಸದ್ಯ ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಯಾರಾದ್ರೂ ಈ ರಸ್ತೆಯಲ್ಲಿ ಹೋದರೆ ಕೈ ಕಾಲು ಮುರಿದು ಹೋಗೋದು ಪಕ್ಕಾ. ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು ಇಲ್ಲಿ ರಸ್ತೆಯನ್ನು ಮಾಡಿ ಜನರಿಗೆ ಅನುಕೂಲ ಮಾಡಿ ಕೊಡಬೇಕಾಗಿದೆ...

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/05/2022 04:24 pm

Cinque Terre

74.8 K

Cinque Terre

5

ಸಂಬಂಧಿತ ಸುದ್ದಿ