ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅವಳಿಗಾಗಿ ಇವನ ಪ್ರಾಣ ತೆಗೆದ ಪಾಗಲ್ ಪ್ರೇಮಿ: ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿಯ ಕೊಲೆ!

ಹುಬ್ಬಳ್ಳಿ: ಅವರು ಇನ್ನೂ ಚಿಗುರು ಮೀಸೆಯ ಹುಡುಗರು. ಪ್ರೀತಿ-ಪ್ರೇಮ-ಪ್ರಣಯ ಅಂತ ಅಲ್ಲಿ ಇಲ್ಲಿ ಸುತ್ತಾಡ್ತಾ ಇದ್ರು. ಈ ನಡುವೆ ತನ್ನ ಪ್ರೇಯಸಿಯೊಂದಿಗೆ ಇನ್ನೊಬ್ಬ ಯುವಕ ಸಲುಗೆ ಬೆಳೆಸಿಕೊಂಡಿದ್ದ ಎಂಬ ಕಾರಣಕ್ಕೆ ಈ ಪಾಗಲ್ ಪ್ರೇಮಿ ನಿರ್ಜನ ಪ್ರದೇಶದಲ್ಲಿ ಆತನ ಕಥೆಯನ್ನೇ ಮುಗಿಸಿಬಿಟ್ಟಿದ್ದಾನೆ.

ಹಳೆ ಹುಬ್ಬಳ್ಳಿ ಇಂದ್ರಪ್ರಸ್ಥ ನಗರದ ವಿನಯ ಹೇಮಂತ ಮೇಘರಾಜ (20) ಕೊಲೆಯಾದ ಯುವಕ. ನವನಗರ ಸಮೀಪದ ಸುತಗಟ್ಟಿಯ ಹೊರವಲಯದಲ್ಲಿ ಬುಧವಾರ ಘಟನೆ ನಡೆದಿದ್ದು, ಆರೋಪಿ ನವನಗರದ ರಾಘವೇಂದ್ರ ಕಮತರನನ್ನು ಎಪಿಎಂಸಿ–ನವನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಧಾರವಾಡದ ಕಾಲೇಜೊಂದರಲ್ಲಿ ಆರೋಪಿ ರಾಘವೇಂದ್ರ ಪ್ರೀತಿಸುತ್ತಿದ್ದ ಯುವತಿ ಮತ್ತು ವಿನಯ ಡಿಪ್ಲೊಮಾ ಓದುತ್ತಿದ್ದರು. ಇತ್ತೀಚೆಗೆ ಯುವತಿಯೊಂದಿಗೆ ವಿನಯ ಸಲುಗೆ ಬೆಳೆಸಿಕೊಂಡಿದ್ದಕ್ಕೆ ಕುಪಿತನಾಗಿದ್ದ ಆರೋಪಿ, ತನ್ನ ಪ್ರೇಯಸಿಯೊಂದಿಗೆ ಮಾತನಾಡದಂತೆ ಎಚ್ಚರಿಕೆ ನೀಡಿದ್ದ.

ಆದರೂ, ಇಬ್ಬರ ನಡುವೆ ಸಲುಗೆ ಮುಂದುವರಿದಿದ್ದನ್ನು ನೋಡಿ ಕೋಪಗೊಂಡ ರಾಘವೇಂದ್ರ, ಸ್ವಲ್ಪ ಮಾತಾಡೋದು ಇದೆ ಬಾ ಎಂದು ನೆಪ‌ ಹೇಳಿ ವಿನಯನನ್ನು ಸುತಗಟ್ಟಿ ಹೊರವಲಯಕ್ಕೆ ಬುಧವಾರ ಸಂಜೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮರುದಿನ ಸ್ಥಳೀಯರು ಮೃತದೇಹವನ್ನು ಗಮನಿಸಿ ಠಾಣೆಗೆ ವಿಷಯ ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Somashekar
Kshetra Samachara

Kshetra Samachara

20/05/2022 02:32 pm

Cinque Terre

43.43 K

Cinque Terre

9

ಸಂಬಂಧಿತ ಸುದ್ದಿ