ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಿಳೆಯ ಮೇಲೆ ನಿರಂತರ ಅತ್ಯಾಚಾರ: FIR ಆದ್ರೂ ಅರೆಸ್ಟ್ ಆಗಿಲ್ಲ ಆರೋಪಿ!

ಹುಬ್ಬಳ್ಳಿ: ಮಹಿಳೆಯ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಶೋಷಣೆ ನಡೆಯುತ್ತಲೇ ಇದೆ. ಆದರೂ ಕೂಡ ಮಹಿಳೆಯರಿಗೆ ಸರಿಯಾದ ನ್ಯಾಯವೇ ಸಿಗುತ್ತಿಲ್ಲ. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದು ಸುಮಾರು ದಿನಗಳೇ ಕಳೆದರೂ ಆರೋಪಿಗಳ ಬಂಧನಕ್ಕೆ ಮಾತ್ರ ಪೊಲೀಸರು ಮೀನಾಮೇಷ‌ ಎಣಿಸುತ್ತಿದ್ದಾರೆ. ಹಾಗಿದ್ದರೇ ಏನಿದು ಘಟನೆ ? ಆಗಿರುವುದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ.

ಹೀಗೆ ಮಾಧ್ಯಮದ ಮುಂದೆ ಕಣ್ಣೀರು ಹಾಕುತ್ತಿರುವ ಈ ಮಹಿಳೆಯ ಹೆಸರು ಗಂಗಮ್ಮ ಬಿಚ್ಚಗತ್ತಿ. ಕಲಘಟಗಿ ತಾಲೂಕಿನ ದೇವಿಕೊಪ್ಪದ ಗ್ರಾಮದ ಮಹಿಳೆ. ಈಕೆಯ ಗಂಡ ಚೆನ್ನಬಸು. ಇತ ತರಕಾರಿ ವ್ಯಾಪಾರ ಮಾಡುತ್ತ ಊರಿನ ಮೌಲಾಸಾಬ ಹುಲಗೂರ ಎಂಬುವವರ ವಾಹನವನ್ನು ಚಲಾಯಿಸುತ್ತಿದ್ದ. ಇತ್ತ ಚೆನ್ನಬಸು ಬೇರೆ ಊರಿಗೆ ಹೋಗುವುದನ್ನೇ ಕಾಯುತ್ತಿದ್ದ ಮೌಲಾಸಾಬ ಹುಲಗೂರ, ಚೆನ್ನಬಸುನ ಹೆಂಡತಿಗೆ ಜೀವ ಬೇದರಿಕೆ ಹಾಕಿ ನಿರಂತರ ಅತ್ಯಾಚಾರ ಮಾಡಿದ್ದಾನೆ. ಸುಮಾರು ಎರಡು ತಿಂಗಳ ಕಾಲ ನಿರಂತರ ಅತ್ಯಾಚಾರ ಮಾಡಿರುವ ಮೌಲಾಸಾಬ, ಗಂಗಮ್ಮಳಿಗೆ ಜೀವ ಬೇದರಿಕೆ ಹಾಕಿ ಈ ವಿಷಯವನ್ನು ಯಾರಿಗಾದರೂ ಹೇಳಿದರೇ ನಿನ್ನ ಗಂಡ ಹಾಗೂ ಮಕ್ಕಳನ್ನು ಕೊಲೆ ಮಾಡಿಸುವುದಾಗಿ ಹೇಳಿ ನಿರಂತರ ಅತ್ಯಾಚಾರ ಮಾಡಿರುವ ಕುರಿತು ಮಹಿಳೆಯೇ ಮಾಧ್ಯಮದ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ಇನ್ನೂ ಮಹಿಳೆಗೆ ತನ್ನಲ್ಲಿರುವ ಹಣ ಹಾಗೂ ಬಂಗಾರವನ್ನು ತೋರಿಸುವ ಮೂಲಕ ನನ್ನಲ್ಲಿ ಇಷ್ಟು ದುಡ್ಡಿದೆ ಏನು ಬೇಕಾದರೂ ಮಾಡುತ್ತೇನೆ ಎಂದು ಅವಾಜ್ ಹಾಕಿರುವ ಮೌಲಾಸಾಬ, ಮಹಿಳೆಯ ನಗ್ನ ಚಿತ್ರಗಳನ್ನು ಸೆರೆಹಿಡಿದು ಬ್ಲಾಕ್ ಮೇಲ್ ಮಾಡಿದ್ದಾನೆ. ಈ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆ ಹಾಗೂ ಕಲಘಟಗಿ ಪೊಲೀಸ್ ಠಾಣೆಗೆ ದೂರು ನೀಡಿ ಎಫ್ಐಆರ್ ದಾಖಲು ಮಾಡಿದರೂ ಕೂಡ ಆರೋಪಿತನನ್ನು ಬಂಧಿಸಿಲ್ಲ. ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಿ ನಮಗೆ ಜೀವ ಬೆದರಿಕೆ ಇದೆ ಎನ್ನುತ್ತಿದ್ದಾರೆ ಕುಟುಂಬದ ಸದಸ್ಯರು.

ಒಟ್ಟಿನಲ್ಲಿ ಮಹಿಳೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದ್ದರೂ ಪೊಲೀಸ್ ಇಲಾಖೆ ಮಾತ್ರ ಸೂಕ್ತ ಕ್ರಮಕ್ಕೆ ಮುಂದಾಗದೇ ಇರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಈ ಬಗ್ಗೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ.

Edited By : Somashekar
Kshetra Samachara

Kshetra Samachara

19/05/2022 03:00 pm

Cinque Terre

44.52 K

Cinque Terre

39

ಸಂಬಂಧಿತ ಸುದ್ದಿ