ಹುಬ್ಬಳ್ಳಿ: ಈ ರಸ್ತೆಯಲ್ಲಿ ಓಡಾಡಬೇಕಾದರೆ ಹುಷಾರ್. ಯಾಕಂದ್ರೆ ಯಾವ ಕ್ಷಣಾರ್ಧದಲ್ಲೂ ನಿಮ್ಮ ಜೀವ ಹೋಗಬಹುದು. ಜನರ ಜೀವನದ ಜೊತೆ ಆಟವಾಡುತ್ತಿದ್ದಾರೆ ಹೆಸ್ಕಾಂ ಅಧಿಕಾರಿಗಳು.
ಹೌದು. ದೇಶಪಾಂಡೆ ನಗರದ ಬ್ಯಾಹಟ್ಟಿ ಪ್ಲಾಟ್‌ನ ವಿದ್ಯುತ್ ಕಂಬದಲ್ಲಿ ಕರೆಂಟ್ ವಾಯರ್‌ಗಳು ಕೆಳಗೆ ನೇತಾಡುತ್ತಿವೆ. ಈ ಸಮಸ್ಯೆ ಬಗ್ಗೆ ಅಲ್ಲಿನ ನಿವಾಸಿಗಳು ಹೆಸ್ಕಾ ಅಧಿಕಾರಿಗಳಿಗೆ ತಿಳಿಸಿದರು ಯಾರು ಕೂಡ ಕ್ಯಾರೆ ಎನ್ನುತ್ತಿಲ್ಲವಂತೆ. ಅಪ್ಪಿತಪ್ಪಿ ಇಲ್ಲಿ ಯಾರಾದರೂ ಓಡಾಡುವಾಗ ಸ್ವಲ್ಪ ತಗುಲಿದರೆ ಜೀವಕ್ಕೆ ಅಪಾಯವಾಗಿದೆ. ಕೂಡಲೆ ಹೆಸ್ಕಾಂ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು.
Kshetra Samachara
09/05/2022 04:52 pm