ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿ ವಾಸೀಂ ಪಠಾಣ್ ಎಂಬಾತನಿಗೆ ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ದೇಶದ್ರೋಹವನ್ನು ಮಾಡಿದವನ ಪರವಾಗಿ ಯಾರು ಕೂಡ ವಕಾಲತ್ತು ವಹಿಸದೇ ಇರುವುದು ನಿಜಕ್ಕೂ ಖುಷಿ ವಿಷಯವಾಗಿದೆ ಎಂದು ಹುಬ್ಬಳ್ಳಿಯ ಹಿರಿಯ ನ್ಯಾಯವಾದಿ ಅಶೋಕ್ ಅಣ್ವೇಕರ್ ಹೇಳಿದರು.
ಮಾಸ್ಟರ್ ಮೈಂಡ್ ವಾಸೀಂ ಪಠಾಣ್ ಪೊಲೀಸ್ ಕಸ್ಟಡಿಗೆ ಆದೇಶಿಸಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, 5 ದಿನ ಪೊಲೀಸ್ ಕಸ್ಟಡಿಗೆ ಒಳಗಾದವನಿಗೆ ಯಾರು ಜಮೀನು ನೀಡಲು ಮುಂದಾಗಿಲ್ಲ. ವಾಸೀಂ ಪಠಾಣ್ ಗೆ ಯಾವೊಬ್ಬ ವಕೀಲರು ಅರ್ಜಿ ಸಲ್ಲಿಕೆಗೆ ಮುಂದಾಗದೇ ಇರುವುದು ಸ್ವಾಗತಾರ್ಹ ಎಂದರು.
ಹುಬ್ಬಳ್ಳಿ ನಗರದಲ್ಲಿ ಇಂತಹ ಘಟನೆಗೆ ಪ್ರಚೋದನೆ ನೀಡಿದ್ದು ತಪ್ಪು. ಮಾಸ್ಟರ್ ಮೈಂಡ್ ಅಂತ ಕರೆಸಿಕೊಳ್ಳುವ ವಾಸೀಂ ಪಠಾಣ್ ಹಿಂದೆ ಯಾರು ಯಾರಿದ್ದಾರೆ ಅನ್ನೋದು ತನಿಖೆ ನಡೆಯಲಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಅವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/04/2022 08:36 pm