ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಲ್ಲು ತೂರಾಟ ಪ್ರಕರಣ 133 ಜನ ಅರೆಸ್ಟ್ : ಖಾಕಿ ಕಾರ್ಯಾಚರಣೆ ಚುರುಕು, ಸ್ಟೇಷನ್ ಮುಂದೆ ಹೈಡ್ರಾಮಾ

ಹುಬ್ಬಳ್ಳಿ: ಶನಿವಾರ ರಾತ್ರಿ ಶಾಂತಿಯಿಂದ ಕೂಡಿದ್ದ ಹುಬ್ಬಳ್ಳಿಯಲ್ಲಿ ಅಶಾಂತಿಯನ್ನು ಹುಟ್ಟು ಹಾಕಿ ಕಲ್ಲು ತೂರಾಟ ನಡೆಸಿರುವ ಗಲಭೆಕೋರರನ್ನು ಬಂಧಿಸುವ ಕಾರ್ಯಾಚರಣೆ ದಿನದಿಂದ ದಿನಕ್ಕೆ ಚುರುಕುಗೊಂಡಿದ್ದು, ಇಂದು ಕೂಡ ಏಳು ಜನ ಆರೋಪಿಗಳನ್ನು ಬಂಧಿಸಿದ ಪೊಲೀಸರು. ವೈದ್ಯಕೀಯ ತಪಾಸಣೆ ಹಾಗೂ ಕಾರಾಗೃಹಕ್ಕೆ ಕರೆದೊಯ್ದಿದ್ದಿದ್ದಾರೆ.

ಹೌದು... ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಆವರಣದಲ್ಲಿ ಶನಿವಾರ ರಾತ್ರಿ ನಡೆದ ಕಲ್ಲು ತೂರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ 133 ಜನರನ್ನು ವಶಕ್ಕೆ ಪಡೆದಿದ್ದು, ದಿನದಿಂದ ದಿನಕ್ಕೆ ಬಂಧಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಈಗಾಗಲೇ ಏಳು ಜನ ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಹಳೆ ಹುಬ್ಬಳ್ಳಿಯ ಠಾಣೆಯಿಂದ ವೈದ್ಯಕೀಯ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ಕಳಿಸಲಾಯಿತು. ಅಲ್ಲದೇ ತಪಾಸಣೆ ಬಳಿಕ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗುತ್ತದೆ.

ಇನ್ನೂ ಮಾಸ್ಟರ್ ಮೈಂಡ್ ಹಾಗೂ ರೌಡಿಶೀಟರ್ ಬಂಧಿಸಿದ ಬೆನ್ನಲ್ಲೇ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಮತ್ತಷ್ಟು ಆರೋಪಿಗಳನ್ನು ಹೆಡೆಮುರಿ ಕಟ್ಟಲು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇಂದು ಕೂಡ ಬಂಧಿತರನ್ನು ಕರೆದುಕೊಂಡು ಹೋಗುವ ವೇಳೆಯಲ್ಲಿ ಪಾಲಕರ ಹೈಡ್ರಾಮಾ ನಡೆದಿದ್ದು, ಸಂಬಂಧಿಕರನ್ನು ಕಂಡ ಆರೋಪಿಗಳು, ಗಳಗಳನೇ ಅಳುವ ಮೂಲಕ ಹೈ ಡ್ರಾಮಾ ಮಾಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

21/04/2022 10:40 pm

Cinque Terre

95.51 K

Cinque Terre

26

ಸಂಬಂಧಿತ ಸುದ್ದಿ