ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆ ಪ್ರಕರಣದ ಗುಪ್ತಚರ ಮಾಹಿತಿಯಿಂದ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಬಂಧಿತರ ಬಿಡುಗಡೆಗೆ ಆಗ್ರಹಿಸಿ ಮತ್ತೊಂದು ಹೋರಾಟಕ್ಕೆ ಕೆಲವು ಸಂಘಟನೆಗಳು ಮುಂದಾಗಿರುವ ಮಾಹಿತಿ ಇದೆ. ಹೀಗಾಗಿ ಏಕಾಏಕಿ ಆರೋಪಿಗಳನ್ನು ಮತ್ತೊಂದು ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ.
ಹುಬ್ಬಳ್ಳಿಯಿಂದ ನವಲಗುಂದ ಮಾರ್ಗವಾಗಿ ಬೇರೆ ಕಡೆ ಆರೋಪಿಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆದೊಯ್ಯಲಾಯಿತು. ಮತ್ತೊಂದು ಗಲಭೆ ನಡೆಯುವ ಮುನ್ಸೂಚನೆ ಇರುವ ಕಾರಣ ಬೇರೆ ಕಡೆಗೆ ಶಿಫ್ಟ್ ಮಾಡಲಾಗಿದೆ ಎನ್ನಲಾಗುತ್ತಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/04/2022 11:09 am