ಹುಬ್ಬಳ್ಳಿ: ಮೊನ್ನೆ ನಡೆದ ಕೋಮುಗಲಭೆಯಿಂದ ಅಕ್ಷರಶಃ ಸ್ತಬ್ಧವಾಗಿದ್ದ ವಾಣಿಜ್ಯನಗರಿ ಹುಬ್ಬಳ್ಳಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಅಂಗಡಿ ಮುಂಗಟ್ಟುಗಳು ಯಥಾಸ್ಥಿತಿಯಲ್ಲಿ ಆರಂಭವಾಗುತ್ತಿವೆ. ಹಾಗಿದ್ದರೇ ಹೇಗಿದೆ ವಾಣಿಜ್ಯನಗರಿ ಹುಬ್ಬಳ್ಳಿಯ ಸ್ಥಿತಿ ಅಂತೀರಾ ? ಇಲ್ಲಿದೆ ನೋಡಿ ಗ್ರೌಂಡ್ ರಿಪೋರ್ಟ್.
ಮೊನ್ನೆಯ ಗಲಭೆ ಬಗ್ಗೆ ಹುಬ್ಬಳ್ಳಿ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಪ್ಪತ್ತು ವರ್ಷದಿಂದ ಯಾವುದೇ ಕೋಮ ಸಂಘರ್ಷಕ್ಕೆ ಅವಕಾಶ ನೀಡಿರಲಿಲ್ಲ. ಸೌಹಾರ್ದತೆಯಿಂದ ಇದ್ದವರ ಮಧ್ಯೆ ವಿಷ ಬೀಜ ಬಿತ್ತಿದ್ದ ಮತಾಂದ ಶಕ್ತಿಗಳನ್ನು ಮಟ್ಟಹಾಕಿ ಅಂತೀದಾರೆ ಹುಬ್ಬಳ್ಳಿ ಜನ.
ಇನ್ನೂ ಮತ್ತೊಮ್ಮೆ ಗಲಭೆಗೆ ಕೈ ಹಾಕದಂತೆ ಕಠಿಣವಾಗಿ ಶಿಕ್ಷಿಸಿ. ಉತ್ತರ ಪ್ರದೇಶ, ಮಧ್ಯಪ್ರದೇಶ ಮಾದರಿಯಲ್ಲಿ ಕಠಿಣ ಕ್ರಮ ಜರುಗಿಸಿ. ಕಲ್ಲು ತೂರಿದವರ ವಿರುದ್ಧ ಕಠಿಣ ಕ್ರಮಕ್ಕೆ ಹುಬ್ಬಳ್ಳಿ ಜನರ ಆಗ್ರಹಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/04/2022 02:14 pm