ಹುಬ್ಬಳ್ಳಿ: ಏಕ್ಕಾ ರಾಜಿ ರಾಣಿ ನನ್ನ ಕೈಯೊಳಗೆ ಹಿಡಿ ಮಣ್ಣು ನಿನ್ನ ಬಾಯೋಳಗೆ.. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ ಎಷ್ಟೇ ಖಡಕ್ ಎಚ್ಚರಿಕೆ ನೀಡಿದರು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಾತ್ರ ಜೂಜಾಟಕ್ಕೆ ಮಾತ್ರ ಬ್ರೇಕ್ ಇಲ್ಲದಂತಾಗಿದೆ.
ಹೌದು... ದೀಪಾವಳಿ ಸಮೀಪಿಸುತ್ತಿದ್ದಂತೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪೊಲೀಸ್ ಕಮೀಷನರೇಟ್ ನಿಂದ ಕಾರ್ಯಾಚರಣೆ ನಡೆಸಿ ಸುಮಾರು 25ಕ್ಕೂ ಹೆಚ್ಚು ಜೂಜುಕೋರರನ್ನು ವಶಕ್ಕೆ ಪಡೆಯಲಾಗಿದೆ. ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಕಮೀಷನರೇಟ್ ಎಷ್ಟೇ ಖಡಕ್ ಎಚ್ಚರಿಕೆ ನೀಡಿದರು. ಕ್ಯಾರೆ ಎನ್ನುತ್ತಿಲ್ಲ.
ಬೆಂಡಿಗೇರಿ ಹಾಗೂ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೇ ಸಾಕಷ್ಟು ಜೂಜಾಟದ ಪ್ರಕರಣಗಳು ದಾಖಲಾಗುತ್ತಿದ್ದು, ಪೊಲೀಸ್ ಕಮೀಷನರೇಟ್ ಹೆಚ್ಚಿನ ನಿಗಾವಹಿಸಬೇಕಿದೆ. ಅಲ್ಲದೇ ಮೊನ್ನೆಯಷ್ಟೇ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಜೂಜಾಟದಲ್ಲಿ ಇಬ್ಬರು ವಿದ್ಯಾರ್ಥಿಗಳು ಬಂಧನವಾಗಿರುವುದು ನಿಜಕ್ಕೂ ಆತಂಕಕಾರಿ ವಿಷಯವಾಗಿದೆ. ಈ ಕುರಿತು ಸಾರ್ವಜನಿಕರು ಕೂಡ ಇಂತಹ ಅವ್ಯವಸ್ಥೆ ನಿರ್ಮೂಲನೆಗೆ ಪೊಲೀಸ್ ಕಮೀಷನರೇಟ್ ಜೊತೆಗೆ ಕೈ ಜೋಡಿಸಲು ಆಯುಕ್ತರು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಪ್ರಖ್ಯಾತಿ ಮತ್ತು ಕುಖ್ಯಾತಿಗಳನ್ನು ಶ್ರೇಣೀಕೃತ ಹಂತದಲ್ಲಿ ಸರಿದೂಗಿಸಿಕೊಂಡು ಹೋಗುತ್ತಿರುವ ವಾಣಿಜ್ಯನಗರಿಯಲ್ಲಿ ಮತ್ತಷ್ಟು ಬಿಗಿ ಬಂದೋಬಸ್ತ್ ಆಗಬೇಕಿದೆ. ಅಲ್ಲದೆ ಪುಂಡ ಪೋಕರಿಗಳಿಗೆ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸಬೇಕಿದೆ.
Kshetra Samachara
08/11/2021 06:47 pm