ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ: ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಹುಬ್ಬಳ್ಳಿ: ಅನೈತಿಕ ಸಂಬಂಧ ಬೆಳೆಸಲು ಪ್ರಯತ್ನಿಸಿದ್ದ ಎಂಬ ಕಾರಣಕ್ಕೆ ಹೊಂಚು ಹಾಕಿ ಕೊಲೆ ಮಾಡಿದ್ದ, ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 60 ಸಾವಿರ ರೂ. ದಂಡ ವಿಧಿಸಿ ನಾಯ್ಯಾಲಯ ಆದೇಶ ಹೊರಡಿಸಿದೆ.

ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಯಲ್ಲಾಪುರ ಓಣಿಯ ಕರಿಗಣ್ಣವರ ಹಕ್ಕಲದ ಗಣೇಶ ಎಂಟರ್ ಪ್ರೈಸೆಸ್ ಹಾಲಿನ ಡೈರಿ ಮಾಲೀಕ ರವಿಚಂದ್ರ ಕುಂದಗೋಳ ಎಂಬಾತ ರಾಘವೇಂದ್ರ ಮಾಳಗಿ ತಂಗಿ ಹಾಗೂ ಮಂಜುನಾಥ ಜೈನಗೌಡ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಲು ಪ್ರಯತ್ನಿಸಿದ್ದಕ್ಕಾಗಿ ದ್ವೇಷದಿಂದ ಮೇ.20 ರಂದು ರಾತ್ರಿ 3.30ಕ್ಕೆ ಡೈರಿಯಲ್ಲಿರುವ ಕಣ್ಣಿಗೆ ಕಾರದ ಪುಡಿ ಎರಚಿ ನಂತರ ಬಡಗಿಯಿಂದ ಹೊಡೆದು ಪ್ರಜ್ಞೆ ತಪ್ಪಿಸಿ ಅವನ ಕೈಕಾಲು ಕಟ್ಟಿ , ಬಾಯಿಗೆ ಬಟ್ಟೆ ತುರುಕಿ ಟಾಟಾ ಏಸ್‌ನಲ್ಲಿ ಅಪಹರಿಸಿಕೊಂಡು ದಾಂಡೇಲಿಯ ಜೋಯಿಡಾ ರಸ್ತೆಯಲ್ಲಿ ಕಾಳಿ ನದಿಯ ದಂಡೆ ಮೇಲೆ ರವಿಚಂದ್ರ ಕುತ್ತಿಗೆ ಹಗ್ಗ ಬೀಗಿದು ಕೊಲೆ ಮಾಡಿದ್ದರು. ಮೃತನ ದೇಹ ವಿರ್ನೋಲಿ ಅರಣ್ಯ ವಲಯದ ತಗ್ಗಿನ ಪ್ರದೇಶದಲ್ಲಿ ಚೆಲ್ಲಿ ಮೃತ ದೇಹದ ಮೇಲೆ ಮಣ್ಣಿನಿಂದ ಹೊತಾಕಿ ಕೊಲೆ ಮಾಡಲು ಬಳಸಿದ ಬಡಗೆ, ಮೊಬೈಲ್ ಮತ್ತು ಸಲಕರಣೆಗಳನ್ನು ಹರಿಯುವ ನೀರಿನಲ್ಲಿ ಎಸೆದು ಸಾಕ್ಷಿ ಪುರಾವೇ ಇಲ್ಲದ ಹಾಗೆ ಮಾಡಿದ್ದರು.

ಕೊಲೆ ಮಾಡಲು ಬಳಸಿದ ಟಾಟಾಯೇಸ್‌ನ್ನು ಧಾರವಾಡದಲ್ಲಿ ಬಿಟ್ಟು ಬಂದಿದ್ದರು. ಮಗ ಮನೆಗೆ ಬಾರದ ಕಾರಣ ತಾಯಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ತನಿಖೆ ಬೆನ್ನತ್ತಿದ ಪೊಲೀಸರಿಗೆ ಧಾರವಾಡದಲ್ಲಿರುವ ಅನುಮಾನಾಸ್ಪದ ಟಾಟಾಯೇಸ್ ದೊರಕಿದೆ. ಹಿನ್ನಲೆ ಪೊಲೀಸರು ಸಾಕ್ಷಿ ಸಮೇತ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆ.12 ರಂದು ಗುರುವಾರದಂದು 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದು, ಬಂಧಿತ ಆರೋಪಿಗಳಾದ ರಾಘವೇಂದ್ರ ಮಾಳಗಿ ಮತ್ತು ಮಂಜುನಾಥ ಜೈ‌ನಗೌಡ್ರಗೆ ಕಲಂ 363, 302, 201ಅಡಿ ಜೀವಾವಧಿ ಶಿಕ್ಷೆ ಮತ್ತು ತಲಾ 60 ಸಾವಿರ ರೂ. ದಂಡ ವಿಧಿಸಿದೆ.

ಕಲಂ 301 ಅಡಿ 5 ವರ್ಷ ಕಾರಾಗೃಹ ಶಿಕ್ಷೆ ತಲಾ 5 ಸಾವಿರ ರೂ. ದಂಡ. ಕಲಂ 363 ಅಡಿ 5 ವರ್ಷ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ. ದಂಡದ ಮೊತ್ತ 1 ಲಕ್ಷ ರೂ. ಮೃತನ ತಾಯಿಗೆ ನೀಡಲು ನ್ಯಾಯಾಲಯ ಆದೇಶ ನೀಡಿದೆ. ತನಿಖೆಯನ್ನು ಬೆಂಡಿಗೇರಿ ಇನಸ್ಪೆಕ್ಟರ್ ಟಿ.ಜಿ. ದೊಡ್ಡಮನಿ ಮಾಡಿದ್ದು, ಸರ್ಕಾರದ ಪರವಾಗಿ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲದ ಅಭಿಯೋಜಕಿ ಗಿರಿಜಾ ತಮಿನಾಳ ವಾದ ಮಾಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

12/08/2021 10:28 pm

Cinque Terre

73.41 K

Cinque Terre

3

ಸಂಬಂಧಿತ ಸುದ್ದಿ