ಮುಂಡಗೋಡ: ಎಟಿಎಂ ಕಾರ್ಡ್ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಅಂತರ ಜಿಲ್ಲಾ ಎಟಿಎಂ ಕಾರ್ಡ್ ವಂಚಕನನ್ನು ಬಂಧಿಸುವಲ್ಲಿ ಮುಂಡಗೋಡ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಂಡಗೋಡ ಪಟ್ಟಣದ ಎಸ್.ಬಿ.ಐ ಬ್ಯಾಂಕ್ ಎ.ಟಿ.ಎಂನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಣ ತೆಗೆದುಕೊಡುವ ನೆಪದಲ್ಲಿ ಮುಂಡಗೋಡಿನ ವ್ಯಕ್ತಿಯೊಬ್ಬನ ಎ.ಟಿ.ಎಂ ಕಾರ್ಡ ಪಡೆದು ಪಾಸ್ ವರ್ಡ್ ತಿಳಿದುಕೊಂಡು ತನ್ನ ಕೈಚಳಕದಿಂದ ವ್ಯಕ್ತಿಯ ಎ.ಟಿ.ಎಂ ಕಾರ್ಡನ್ನು ಆರೋಪಿತನು ತೆಗೆದುಕೊಂಡು ತನ್ನಲ್ಲಿರುವ ಬೇರೆ ಎ.ಟಿ.ಎಂ ಕಾರ್ಡನ್ನು ಕೊಟ್ಟು ನಂತರ ಅದೇ ದಿನ ವ್ಯಕ್ತಿಯ ಎ.ಟಿ.ಎಂ ಉಪಯೋಗಿಸಿ 20,000/-ರೂ ಹಣವನ್ನು ಡ್ರಾ ಮಾಡಿ ಮೋಸ ಮಾಡಿದ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣ ಬೆನ್ನಟ್ಟಿದ ಪೊಲೀಸರು ಗಿರೀಶ ಸಿದ್ದಪ್ಪ ಮುನಿಯಪ್ಪನವರ ಎಂಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಮುಂಡಗೋಡ-01 ಹಾಗೂ ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ- 01 ಹಾಗೂ ಬ್ಯಾಡಗಿಯಲ್ಲಿ 02,ಹೀಗೆ ಒಟ್ಟು 04 ಎ.ಟಿ.ಎಮ್ ಕಾರ್ಡ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಆರೋಪಿತನಿಂದ ಒಟ್ಟು 47,500ರೂ ಹಣ ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲನ್ನು ಜಪ್ತಿಮಾಡಲಾಗಿದೆ.
ಪೊಲೀಸ್ ಅಧೀಕ್ಷಕರಾದ ಶಿವ ಪ್ರಕಾಶ್ ದೇವರಾಜು ಹಾಗೂ ಎಸ್ ಬದರಿನಾಥ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳಾದ ಪಿಐ ಪ್ರಭುಗೌಡ ಡಿ.ಕೆ, ಪಿಎಸ್ಐ ಬಸವರಾಜ ಮಬನುರ, ಬಾಬುದ್ದಿನ್ ಪ್ರೊ ಸೇರಿದಂತೆ ಇನ್ನಿತರ ಸಿಬ್ಬಂದಿಗಳ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಬಹುಮಾನ ಘೋಷಿಸಿರುತ್ತಾರೆ.
Kshetra Samachara
05/02/2021 03:11 pm