ಧಾರವಾಡ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಅವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಮಂಗಳವಾರ ವಿಚಾರಣೆ ನಡೆಸುವ ಕೇಂದ್ರವನ್ನೇ ಬದಲಿಸಿ ತೀವ್ರ ಕುತೂಹಲ ಕೆರಳಿಸಿದರು.
ಉಪನಗರ ಪೊಲೀಸ್ ಠಾಣೆಯಲ್ಲಿ ಇಷ್ಟು ದಿನ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು ಇಂದು ಡಯಟ್ ನಲ್ಲಿ ಹಲವರನ್ನು ವಿಚಾರಣೆಗೆ ಒಳಪಡಿಸಿದರು.
ಪೊಲೀಸ್ ಅಧಿಕಾರಿ ಹಾಗೂ ಕೆಲ ಜನಪ್ರತಿನಿಧಿಗಳನ್ನು ಡಯಟ್ ಗೆ ಕರೆಯಿಸಿ ಅಲ್ಲಿಯೇ ವಿಚಾರಣೆಗೊಳಪಡಿಸಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
Kshetra Samachara
29/09/2020 06:18 pm