ಹುಬ್ಬಳ್ಳಿ: ಐಪಿಎಲ್ ಕ್ರಿಕೆಟ್ ಪಂದ್ಯದ ಮೇಲೆ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದವರನ್ನು ಬಂಧಿಸಿ 24,450 ರೂ. ನಗದು ಮತ್ತು 4 ಮೊಬೈಲ್ ಗಳನ್ನು ವಶಪಡಿಸಿಕೊಂಡ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಐಪಿಎಲ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಹಳೇ ಹುಬ್ಬಳ್ಳಿ ನೂರಾನಿ ಪ್ಲಾಟ್‌ನ ಜಾವೇದ್‌ಅಹಮ್ಮದ್ ಸೌದಾಗರ, ಬಾಣತಿಕಟ್ಟೆಯ ಸದ್ದಾಂ ಕುಂದಗೋಳ, ರಜಿಯಾಟೌನ್‌ನ ಜಫ್ರುಲ್ಲಾ ಧಾರವಾಡ, ಕಮರೀಪೆಟೆಯ ನಿಂಗುಸಾ ಹಬೀಬ ಹಾಗೂ ದೇವಾಂಗಪೇಟೆಯ ಅಶೋಕ ಕೊಳೆಕರ ಎಂಬುವರನ್ನು ಬಂಧಿಸಲಾಗಿದ್ದು, ಇಬ್ಬರು ಆರೋಪಿತರು ಪರಾರಿಯಾಗಿದ್ದಾರೆ.
ಸೆ. 30 ರಂದು ರಾತ್ರಿ 8.45 ಗಂಟೆಗೆ ಹಳೇಹುಬ್ಬಳ್ಳಿ ಬಾಣತಿಕಟ್ಟಿ ಸರ್ಕಲ್ ಹತ್ತಿರದ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮೊಬೈಲ್ ಪೋನ್ ಮೂಲಕ ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಮಧ್ಯ ನಡೆಯುತ್ತಿದ್ದ ಕ್ರಿಕೆಟ್ ಆಟದ ಮೇಲೆ ಬೆಟ್ಟಿಂಗ್ ಆಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸ್ ವಿಶೇಷ ತಂಡವು, ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ದಾಳಿಯಲ್ಲಿ ಹಳೇಹುಬ್ಬಳ್ಳಿ ಠಾಣೆ ಇನ್ಸಪೆಕ್ಟರ್‌ಗಳಾದ ಎಸ್.ಬಿ. ಮಾಳಗೊಂಡ, ಎಸ್.ಎಸ್. ಕಮತಗಿ ಇವರ ನೇತೃತ್ವದಲ್ಲಿ ಪಿಎಸ್‌ಐ ಎಸ್. ಬಿ. ಸಿಂಗೆ ಮತ್ತು ಸಿಬ್ಬಂದಿ ಪಿ.ಜಿ. ಪುರಾಣಿಕಮಠ, ಬಿ.ಆರ್. ಮುದೇನಗುಡಿ, ಎಸ್.ಬಿ ಮಡಿವಾಳರ, ಎನ್.ಎಂ. ಪಾಟೀಲ, ಸಿ.ಎಫ್. ಅಂಬಿಗೇರ, ಎಂ.ಬಿ. ಭಜಂತ್ರಿ, ವಿ.ಎಸ್. ಗುಡಗೇರಿ, ಕೆ.ಎನ್. ಮೋಟೆಬೆನ್ನೂರ, ಪಿ.ಜಿ ಹೊಸಮನಿ, ಎಮ್.ಬಿ. ಪಾಟೀಲ ಭಾಗವಹಿಸಿದ್ದರು. ಈ ತಂಡಕ್ಕೆ ಹು- ಧಾ ಪೊಲೀಸ್ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.
Kshetra Samachara
02/10/2020 03:34 pm