ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ಜಾಗವನ್ನು ಅತಿಕ್ರಮಣ ಮಾಡಿದ್ರೆ ಹುಷಾರ್;ಉಪ ಆಯುಕ್ತರ ಖಡಕ್ ಎಚ್ಚರಿಕೆ

ಹುಬ್ಬಳ್ಳಿ: ಒಂದೆಡೆ ಜೆಸಿಬಿ ಯಿಂದ ಬೋರ್ಡ್ ಗಳ ತೆರವು ಕಾರ್ಯಾಚರಣೆ,ಇನ್ನೊಂದೆಡೆ ಯಾವುದೇ ರೀತಿಯಾಗಿ ಅಹಿತಕರ ಘಟನೆಗಳು ಜರುಗದಂತೆ ಪಾಲಿಕೆಯ ಅಧಿಕಾರಿಗಳಿಗೆ ಪೊಲೀಸ್ ಸೆಕ್ಯೂರಿಟಿ,ಅರೆ ಮೊನ್ನೇ ಮೊನ್ನೇ ತಾನೆ ಹೊಸದಾಗಿ ಶುರು ಆಗಿರೋ ಈ ದಾಬಾ ಮುಂದೆ ಇದೆಲ್ಲಾ ಏನು ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.

ಹೀಗೆ ಈ ಜೆಸಿಬಿ ಯಿಂದ ಬೋರ್ಡ್ ಗಳನ್ನು ಕೆಡುವುತ್ತಿರೋ ದ್ರಶ್ಯಗಳೆಲ್ಲ ಕಂಡು ಬಂದಿದ್ದು ಹುಬ್ಬಳ್ಳಿಯ ಗಬ್ಬುರಿನ ಪುನಾ-ಬೆಂಗಳೂರು ರಸ್ತೆಯ ಪಕ್ಕದಲ್ಲಿ,ಕಳೆದ ಒಂದು ವಾರದ ಹಿಂದೆ ಗಬ್ಬುರಿನಲ್ಲಿ ಪವನ ಎಂಬ ಹೆಸರಿನ ದಾಬಾ ಹೊಸದಾಗಿ ಆರಂಭಗೊಂಡಿತ್ತು,ಆದ್ರೆ ದಾಬಾ ದವರು ಮಾತ್ರ ತಮಗೆ ಸೇರಿದ ಜಾಗದಲ್ಲಿ ತಮ್ಮ ದಾಬಾ ಅಭಿವೃದ್ಧಿ ಮಾಡಿಕೊಳ್ಳೋದು ಬಿಟ್ಟು ಪಾಲಿಕೆ ಜಾಗವನ್ನು ಅತಿಕ್ರಮಣ ಮಾಡಿದ್ದಲದೇ ರಸ್ತೆ ಹಾಗೂ ಬೋರ್ಡ್ ಗಳನ್ನು ನಿಲ್ಲಿಸಿಬಿಟ್ಟಿದ್ರು, ಅಷ್ಟೇ ಅಲ್ಲದೆ ಇದನ್ನು ಪ್ರಶ್ನೆ ಮಾಡಲು ಹೋದ ಪಾಲಿಕೆ ಅಧಿಕಾರಿಗಳಿಗೆ ಆವಾಜ್ ಕೂಡಾ ಹಾಕಿದ್ರಂತೆ.

ಹೀಗಾಗಿ ಹುಬ್ಬಳ್ಳಿಯ ವಲಯ ಕಚೇರಿ 11ರ ಅಧಿಕಾರಿ ಆನಂದ ಬೆಂಡಿಗೇರಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.ಕೂಡಲೇ ಸ್ಥಳಕ್ಕೆ ಅಗಮಿಸಿದ ಬೆಂಡಿಗೇರಿ ಠಾಣೆಯ ಪೊಲೀಸರು ಪಾಲಿಕೆಯ ಅಧಿಕಾರಿಗಳಿಗೆ ಸೆಕ್ಯೂರಿಟಿ ಕೊಟ್ಟ ನಂತರದಲ್ಲಿ,ಅಧಿಕಾರಿಗಳು ಜೆಸಿಬಿ ಯಿಂದ ದಾಬಾ ದವರು ಹಾಕಿದ ಬೋರ್ಡ್ ಹಾಗೂ ರಸ್ತೆಯನ್ನು ತೆರವುಗೊಳಿಸಿದ್ದಾರೆ.ಅಷ್ಟೇ ಅಲ್ಲದೆ ಮತ್ತೇ ಈ ರೀತಿಯಾಗಿ ಪಾಲಿಕೆ ಜಾಗವನ್ನು ಅತಿಕ್ರಮಣ ಮಾಡಿದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಕೂಡಾ ಉಪ ಆಯುಕ್ತ ಆನಂದ ಕಾಂಬ್ಳೆ ನೀಡಿದ್ದಾರೆ.

ಒಟ್ಟಿನಲ್ಲಿ ಪಾಲಿಕೆ ಜಾಗವನ್ನು ಅತಿಕ್ರಮಣ ಮಾಡಿ ಅಧಿಕಾರಿಗಳಿಗೆ ಆವಾಜ್ ಹಾಕುವವರಿಗೆ ಅಧಿಕಾರಿಗಳು ತಮ್ಮದೇ ಶೈಲಿಯಲ್ಲಿ ಬುದ್ದಿ ಕಲಿಸಿದ್ದಾರೆ. ಅಷ್ಟೇ ಅಲ್ಲದೆ ನಗರದ ಇನ್ನು ಕೆಲವೆಡೆಗಳಲ್ಲಿ ಪಾಲಿಕೆ ಜಾಗಗಳು ಅತಿಕ್ರಮಣ ಆಗಿದ್ದು ಅಂತವುಗಳನ್ನು ಪತ್ತೇ ಮಾಡಿ ತೆರವುಗೊಳಿಸುವ ಕಾರ್ಯಕ್ಕೆ ಪಾಲಿಕೆ ಅಧಿಕಾರಿಗಳು ಮುಂದಾಗಬೇಕಿದೆ.

ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
Kshetra Samachara

Kshetra Samachara

03/09/2022 11:06 am

Cinque Terre

59.3 K

Cinque Terre

7

ಸಂಬಂಧಿತ ಸುದ್ದಿ