ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 2 ತಿಂಗಳ ಬಳಿಕ ಖಾಕಿ ಬಲೆಗೆ ಬಿದ್ದ ಬೈಕ್ ಸೈಲೆನ್ಸರ್ ಕಳ್ಳ

ಹುಬ್ಬಳ್ಳಿ: ಒಬ್ಬನೇ ಒಬ್ಬ ಕಳ್ಳನನ್ನು ಹಿಡಿಯಲು ಕಸಬಾಪೇಟೆ ಪೊಲೀಸರು ಬರೋಬ್ಬರಿ 2 ತಿಂಗಳು ತೆಗೆದುಕೊಂಡು ಕೊನೆಗೂ ರೆಡ್ ಹ್ಯಾಂಡ್ ಆಗಿ ಹಿಡಿದು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೊಲೀಸರಿಗೆ ತಲೆನೋವಾಗಿದ್ದ ECO ವಾಹನಗಳ ಸೈಲೆನ್ಸರ್ ಕಳ್ಳತನ ಪ್ರಕರಣಗಳು ಅವಳಿ ನಗರ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಕಸಬಾಪೇಟೆ, ಬೆಂಡಿಗೇರಿ, ವಿದ್ಯಾನಗರ, APMC ನವನಗರ ಸೇರಿದಂತೆ ಧಾರವಾಡದಲ್ಲೂ ಕೂಡ ಈ ಕಳ್ಳ ಹಾವಳಿ ಇಟ್ಟಿದ್ದ.

ಹಳೆಯ ಹುಬ್ಬಳ್ಳಿಯ ಕಲ್ಮೇಶ್ವರ ನಗರದ ತೋಹಿದ್ ECO ಕಾರ್‌ನ ಸೈಲೆನ್ಸರ್ ಕಳ್ಳತನ ಮಾಡುತ್ತಿದ್ದ. ಈತನಿಂದ ಧಾರವಾಡ ಮೂಲದ ಅಬ್ದುಲ್ ರಹೀಮ್ ಮಾಲು ಖರೀದಿಸುತ್ತಿದ್ದ. ಸದ್ಯ ಇವರಿಬ್ಬರನ್ನೂ ಕಸಬಾಪೇಟೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರವಿ, ವಿಶ್ವನಾಥ್ ಕಾನ್‌ಸ್ಟೇಬಲ್‌ಗಳಾದ ಎಚ್‌.ಎಸ್‌.ಕಲ್ಲಾಪುರ, ಸರ್ಕಾರ, ನಾವಳ್ಳಿ ರಾಥೋಡ್ ಹಾಗೂ ಮೇಟಿ ಸೇರಿದಂತೆ ಪೂರ್ತಿ ಠಾಣೆಯ ಸಿಬ್ಬಂದಿ ಸತತ ಎರಡು ತಿಂಗಳು ಹಗಲು ರಾತ್ರಿ ವಾಹನದ ಗಸ್ತು ತಿರುಗಿ ಕೊನೆಗೂ ರೆಡ್ ಹ್ಯಾಂಡ್ ಆಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ECO ವಾಹನದಲ್ಲಿ ಬರುವ ಸೈಲೆನ್ಸರ್ ಅಲ್ಯೂಮಿನಿಯಂ ಇದ್ದರೆ ಮಾತ್ರ ಟಾರ್ಗೆಟ್ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಇವರಿಂದ 13 ಸೈಲೆನ್ಸರ್ ಸೇರಿ 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದ್ದು, ತೋಹಿದ್ ಹಾಗೂ ಅಬ್ದುಲ್ ರಹೀಮ್ ಅನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ವಿನಯ ರೆಡ್ಡಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Somashekar
Kshetra Samachara

Kshetra Samachara

16/08/2022 03:15 pm

Cinque Terre

55.24 K

Cinque Terre

4

ಸಂಬಂಧಿತ ಸುದ್ದಿ