ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಿಂದೂ ಕಾರ್ಯಕರ್ತನ ಹತ್ಯೆ ಖಂಡನೀಯ: ಹಿಂದೂಸ್ತಾನ ಜನತಾ ಪಾರ್ಟಿ ಆಕ್ರೋಶ

ಹುಬ್ಬಳ್ಳಿ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಹಿಂದೂ ಕಾರ್ಯಕರ್ತನ ಭೀಕರ ಹತ್ಯೆ ಖಂಡಿಸಿ ಹಿಂದೂಸ್ತಾನ ಜನತಾ ಪಾರ್ಟಿಯ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಅಮಾಯಕ ಕನ್ನಯ್ಯ ಲಾಲ್ ಅವರನ್ನು ಮುಸ್ಲಿಂ ಭಯೋತ್ಪಾದಕರು ಕ್ರೂರ ರೀತಿಯಿಂದ ಕತ್ತು ಸೀಳಿ ಹತ್ಯೆ ಮಾಡಿರುವುದು ನಿಜಕ್ಕೂ ಖಂಡನೀಯ. ಈ ಹತ್ಯೆಯು ಸಂವಿಧಾನದ ಕಗ್ಗೊಲೆ ಆಗಿದ್ದು, ತಕ್ಷಣ ರಾಷ್ಟ್ರಪತಿಗಳು ಆರೋಪಿಗಳನ್ನು ಬಂಧಿಸಲು ಆದೇಶ ಮಾಡಿ ಯಾವುದೇ ವಿಚಾರಣೆ ಮಾಡದೇ ಗಲ್ಲಿಗೇರಿಸಬೇಕೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹಾಗೇ ಇಂತಹ ಕೃತ್ಯಗಳಿಗೆ ಕುಮ್ಮಕ್ಕು ಕೊಡುವ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಹಿಂದೂಗಳ ಮೇಲೆ ನಡೆಯುತ್ತಿರುವ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವ ಕಾರ್ಯವನ್ನು ಮಾಡಬೇಕಿದೆ ಎಂದು ಆಗ್ರಹಿಸಿದ್ದಾರೆ..

Edited By : Somashekar
Kshetra Samachara

Kshetra Samachara

01/07/2022 01:34 pm

Cinque Terre

46.18 K

Cinque Terre

4

ಸಂಬಂಧಿತ ಸುದ್ದಿ