ಹುಬ್ಬಳ್ಳಿ: ಪೊಲೀಸರಿಗೆ ಹಿಂದೂಪರ ಕಾರ್ಯಕರ್ತ ಧಮ್ಕಿ ಹಾಕಿದ ವಿಚಾರದ ಹಿನ್ನೆಲೆಯಲ್ಲಿ ಏಕಾಏಕಿ ಪೊಲೀಸ್ ಠಾಣೆಗೆ ನುಗ್ಗಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಧಾಂದಲೆಗೆ ಮುಂದಾಗಿದ್ದಾರೆ.
ವಿದ್ಯಾನಗರ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಕಾರ್ಯಕರ್ತರು, ಸರಣಿ ಕಳ್ಳತನದ ಆರೋಪಿಗಳನ್ನು ಬಂಧಿಸುವಂತೆ ವಾಗ್ವಾದ ನಡೆಸಿದರು. ಪೊಲೀಸರಿಗೆ ಧಮ್ಕಿ ಹಾಕಿದ ಹಿಂದೂಪರ ಸಂಘಟನೆ ಕಾರ್ಯಕರ್ತನೊಂದಿಗೆ ಆಗಮಿಸಿದ ಹತ್ತಾರು ಕಾರ್ಯಕರ್ತರು, ಏಕಾಏಕಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರೊಂದಿಗೆ ಕೆಲಕಾಲ ಜಗಳಕ್ಕಿಳಿದ ದೃಶ್ಯಗಳು ಕಂಡು ಬಂದಿವೆ.
ಇನ್ನೂ ಪೊಲೀಸರಿಗೆ ಕಳ್ಳತನದ ಸ್ಥಳ ಪರಿಶೀಲನೆಗೆ ಆಸ್ಪದ ಮಾಡಿಕೊಡದೇ ಏಕಾಏಕಿ ಧಾಂದಲೆ ಮಾಡಿದ್ದು, ಠಾಣೆಗೆ ನುಗ್ಗಿ ಅಲ್ಲಿಯೂ ಪೊಲೀಸರ ಮೇಲೆ ದರ್ಪ ತೋರಿಸಿದ್ದಾರೆ ಎಂದು ಪೊಲೀಸರು ದೂರಿದರು.
Kshetra Samachara
13/06/2022 02:16 pm