ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಪೇದೆಗೆ ಕಪಾಳ‌ಮೋಕ್ಷ ಮಾಡಿದ ಎಸಿಪಿ: ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಅಧಿಕಾರಿಯ ದರ್ಪ..!

ಹುಬ್ಬಳ್ಳಿ: ಕರ್ತವ್ಯ ನಿರತ ಪೊಲೀಸ್ ಪೇದೆಗೆ ಹಿರಿಯ ಅಧಿಕಾರಿಯೊಬ್ಬರು ಕಪಾಳ ಮೋಕ್ಷ ಮಾಡಿ ಎಎಸ್ಐ ಜೊತೆ ರಂಪಾಟ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಠಾಣೆಯ ಪೇದೆ ಹಾಗೂ ಎಎಸ್ಐ ಮೇಲೆ ಎಸಿಪಿ ಹೊಸಮನಿ ದರ್ಪ ತೋರಿದ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಕ್ರಮ ಮರಳು ಸಾಗಾಟ ಹಾಗು ಮರಳು ತುಂಬಿದ ಲಾರಿಗಳು ಮಹಾನಗರದಲ್ಲಿ ಇತ್ತೀಚೆಗೆ ಓಡಾಡುತ್ತಿರುವ ಪರಿಣಾಮ ಅಕ್ರಮಕ್ಕೆ ಬ್ರೇಕ್ ಹಾಕುವಂತೆ ಪೊಲೀಸ್ ಆಯುಕ್ತ ಲಾಬೂರಾಮಸಿಂಗ್ ಇಲಾಖೆಯ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದರು.

ಪೊಲೀಸ್ ಆಯುಕ್ತರ ನಿರ್ದೇಶನದಂತೆ ಇಲಾಖೆಯ ಸಿಬ್ಬಂದಿಗಳು ಮರಳು ಲಾರಿಗಳ ಓಡಾಟಕ್ಕೆ ಬ್ರೇಕ್ ಹಾಕಿದ್ದರು.

ಇದರಿಂದ ಕುಪಿತಗೊಂಡ ಸಂಚಾರಿ ವಿಭಾಗದ ಎಸಿಪಿ ಎಂ.ಎಸ್ ಹೊಸಮನಿ ಶುಕ್ರವಾರ ರಾತ್ರಿ ನೈಟ್ ರೌಂಡ್ಸನಲ್ಲಿದ್ದ ವೇಳೆ ದಕ್ಷಿಣ ಸಂಚಾರಿ ಠಾಣೆಯ ಪೇದೆಯೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಅಷ್ಟೇ ಅಲ್ಲ. ಇದೇ ವೇಳೆ ಠಾಣೆಯಲ್ಲಿದ್ದ ಎಎಸ್ಐ ಜೊತೆಗೂ ಗಲಾಟೆ ಮಾಡಿದ್ದಾರೆ.

ಎಸಿಪಿ ಎಂ.ಎಸ್ ಹೊಸಮನಿ ಪೇದೆ ಮೇಲೆ ಕಪಾಳ ಮೋಕ್ಷ ಮಾಡಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆಯ ಮಾಹಿತಿ ಪೊಲೀಸ್ ಆಯುಕ್ತರವರೆಗೂ ತಲುಪಿದೆ.

ಎಸಿಪಿ ಎಂ ಎಸ್ ಹೊಸಮನಿ ಕಪಾಳಮೋಕ್ಷ ಮಾಡಿದ ಬಗ್ಗೆ ಇದೀಗ ಇಲಾಖಾ ವಿಚಾರಣೆ ಆರಂಭವಾಗಿದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ತವರಲ್ಲೇ ಪೇದೆ ಮೇಲೆ ಹಿರಿಯ ಅಧಿಕಾರಿ ದರ್ಪ ಮೆರೆದಿರುವುದು ಪೊಲೀಸ್ ಇಲಾಖೆಯ ಮಾನವನ್ನೇ ಹರಾಜು ಹಾಕಿದಂತಾಗಿದೆ.

Edited By : Manjunath H D
Kshetra Samachara

Kshetra Samachara

20/12/2020 11:34 am

Cinque Terre

96.77 K

Cinque Terre

36

ಸಂಬಂಧಿತ ಸುದ್ದಿ