ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಮತ್ತೂ ಜೈಲೇ ಗತಿಯಾಗಿದೆ.
ಜಾಮೀನು ಕೋರಿ ವಿನಯ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಧಾರವಾಡದ ಜಿಲ್ಲಾ ನ್ಯಾಯಾಲಯ ನ.18ಕ್ಕೆ ಮುಂದೂಡಿದೆ.
ಈಗಾಗಲೇ ಜಿಲ್ಲಾ ನ್ಯಾಯಾಲಯ ನ.23ರ ವರೆಗೆ ವಿನಯ್ ಕುಲಕರ್ಣಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ಈ ಮಧ್ಯೆ ವಿನಯ್ ಪರ ವಕೀಲರು ಕಳೆದ ಸೋಮವಾರವೇ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ನ.18ಕ್ಕೆ ವಿಚಾರಣೆ ಮುಂದೂಡಿದೆ.
ಜಾಮೀನು ಸಿಕ್ಕು ರಿಲೀಫ್ ಸಿಗಬಹುದು ಎಂದುಕೊಂಡಿದ್ದ ವಿನಯ್ ಹಾಗೂ ಅವರ ಬೆಂಬಲಿಗರಿಗೆ ನ್ಯಾಯಾಲಯ ಮತ್ತೆ ಶಾಕ್ ನೀಡಿದೆ. ಇದರಿಂದ ವಿನಯ್ ಅವರು ಜೈಲಲ್ಲೇ ದೀಪಾವಳಿ ಆಚರಿಸುವಂತಾಗಿದೆ.
Kshetra Samachara
12/11/2020 03:12 pm