ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಸಾಲು ಸಾಲು ಅಪಘಾತದಿಂದ ರೋಸಿ ಹೋದ ಜನತೆ: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ನವಲಗುಂದ : ನವಲಗುಂದ ಪಟ್ಟಣದ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ನವಲಗುಂದ ಜನತೆಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದೆ. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಾಕಷ್ಟು ಬಾರಿ ಸುದ್ದಿ ಬಿತ್ತರಿಸಿದೆ. ಆದರೆ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂಬುದಕ್ಕೆ ಉದಾಹರಣೆಗಳು ಸಾಕಷ್ಟಿವೆ.

ಗುರುವಾರ ಇದೇ ಹೆದ್ದಾರಿ ಮೇಲೆ ಅಪಘಾತದಿಂದ ಒಂದು ಪ್ರಾಣ ಪಕ್ಷಿ ಹಾರಿ ಹೋಗಿದೆ. ಇದೇ ಸ್ಥಳದಲ್ಲಿ ರೋಡ್ ಬ್ರೇಕರ್ ಹಾಕಬೇಕು ಎಂಬ ಆಗ್ರಹಕ್ಕೆ ಪಬ್ಲಿಕ್ ನೆಕ್ಸ್ಟ್ ಧ್ವನಿಯಾಗಿತ್ತು. ಕಳೆದ ಒಂದು ವರ್ಷದಿಂದ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯ ಬಗ್ಗೆ ಸುದ್ದಿ ಬಿತ್ತರಿಸುತ್ತಲೇ ಬಂದಿದೆ. ನವೀನ ಪಾರ್ಕ್ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿಯ ಪಂಚರ್ ಅಂಗಡಿ ಸೇರಿದಂತೆ ಹಲವು ಅಂಗಡಿಗಳ ತೆರವು ಮಾಡಬೇಕು ಎಂಬ ಆಗ್ರಹಗಳ ಸಮಗ್ರ ವರದಿ ಮಾಡಿದ್ರೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ಅಧಿಕಾರಿಗಳಿಗೆ ಮನವಿ ನೀಡಿದ್ರೂ ಸ್ಪಂದನೆ ಸಿಕ್ಕಿಲ್ಲ.

ಇಷ್ಟೇ ಅಲ್ಲದೇ ಇಲ್ಲಿ ರಸ್ತೆ ಮೇಲೆಯೇ ನಿಲ್ಲುತ್ತಿರುವ ವಾಹನಗಳಿಗೆ ಕಡಿವಾಣ ಹಾಕಲು ಸಹ ಇದೇ ತಿಂಗಳು ವರದಿ ಬಿತ್ತರಿಸಲಾಗಿತ್ತು. ಈ ಬಗ್ಗೆ ಪೊಲೀಸ್ ಇಲಾಖೆ, ಪುರಸಭೆ ಅಥವಾ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಎಚ್ಚೆತ್ತುಕೊಂಡು ಅಂಗಡಿಗಳ ತೆರವು ಮಾಡಿ, ಇಲ್ಲಿ ನಿಲ್ಲುತ್ತಿರುವ ವಾಹನಗಳಿಗೆ ಕಡಿವಾಣ ಹಾಕಬೇಕು. ಪ್ರಮುಖ ವೃತ್ತಗಳಲ್ಲಿ ರೋಡ್ ಬ್ರೇಕರ್ ನಿರ್ಮಿಸಬೇಕು ಎಂಬ ಆಗ್ರಹವಿದ್ದು, ಸ್ಥಳೀಯ ಶಾಸಕರಾದರೂ ಈ ಬಗ್ಗೆ ಗಮನ ಹರಿಸಬೇಕು ಎಂಬುದು ನವಲಗುಂದದ ಸಾರ್ವಜನಿಕರ ಅಭಿಪ್ರಾಯವಾಗಿದೆ.

Edited By : Somashekar
Kshetra Samachara

Kshetra Samachara

17/05/2022 02:34 pm

Cinque Terre

76.97 K

Cinque Terre

0

ಸಂಬಂಧಿತ ಸುದ್ದಿ