ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಗೆ ಬಂದಿದ್ದ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಎರಡು ಪ್ರತಿಷ್ಟಿತ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳ ಮಧ್ಯೆ ಈ ಮೊದಲೇ ಜಗಳವಾಗಿತ್ತು. ಇಂದು ಗೋಕಾಕ್ ಮೂಲದ ವಿದ್ಯಾರ್ಥಿ ತನ್ನೊಂದಿಗೆ ಜಗಳವಾಡಿದ ಮತ್ತೊಂದು ಕೋಚಿಂಗ್ ಸೆಂಟರ್ ವಿದ್ಯಾರ್ಥಿ ಬಳಿ ಬಂದು ಕ್ಯಾತೆ ತೆಗೆದಿದ್ದಾನೆ. ಇದು ವಿಕೋಪಕ್ಕೆ ಹೋಗಿದ್ದು, ಆ ಕೋಚಿಂಗ್ ಸೆಂಟರ್ ಮಾಲೀಕ ಕೂಡ ಇದರ ಮಧ್ಯೆ ಪ್ರವೇಶಿಸಿದ್ದಾರೆ.
ಗೋಕಾಕ್ ಮೂಲದ ವಿದ್ಯಾರ್ಥಿಯನ್ನು ಇತರ ವಿದ್ಯಾರ್ಥಿಗಳು ಕಂಪೌಂಡ್ ಗೆ ಕಟ್ಟಿ ಥಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಉಪನಗರ ಠಾಣೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.ನಂತರ ಎರಡೂ ಪಾರ್ಟಿಗಳನ್ನು ಉಪನಗರ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಥಳಿತಕ್ಕೊಳಗಾದ ಗೋಕಾಕ್ ಮೂಲದ ವಿದ್ಯಾರ್ಥಿ ತನ್ನ ಮೇಲೆ ಹಲ್ಲೆ ಮಾಡಿದವರ ಮೇಲೆ ಹಾಫ್ ಮರ್ಡರ್ ಕೇಸು ದಾಖಲಿಸುತ್ತೇನೆ ಎಂದರೆ, ನಮ್ಮ ಕೋಚಿಂಗ್ ಸೆಂಟರ್ ಗಳಲ್ಲಿನ ಸಾಮಾನುಗಳನ್ನು ಧ್ವಂಸಗೊಳಿಸಿದ್ದಕ್ಕಾಗಿ ನಾವೂ ಕೇಸು ದಾಖಲಿಸುತ್ತೇವೆ ಎಂದು ಆರೋಪ, ಪ್ರತ್ಯಾರೋಪ ಮಾಡಿದ್ದಾರೆ.
Kshetra Samachara
03/11/2020 12:10 pm