ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಸಾಲದ ಬಾಧೆ ತಾಳದೆ ರೈತ ನೇಣಿಗೆ ಶರಣು

ಕುಂದಗೋಳ: ಸಾಲದ ಬಾಧೆಗೆ ಮನನೊಂದು ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾದ ಘಟನೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಮಂಜುನಾಥ ಬಸವರಾಜ ಪಲ್ಲೇದ (31) ಆತ್ಮಹತ್ಯೆ ಮಾಡಿಕೊಂಡ ರೈತ. ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದ ಮಂಜುನಾಥ ಹೊಲಕ್ಕೆ ಎಣ್ಣೆ, ಗೊಬ್ಬರ ಹಾಕಲಿಕ್ಕೆ ಹಾಗೂ ಮನೆಯ ಖರ್ಚಿಗಾಗಿ ತನ್ನ ತಂದೆ, ಅಣ್ಣ ತಮ್ಮಂದಿರ ಹೆಸರಲ್ಲಿ ಜಂಟಿಯಾಗಿ ಸಂಶಿಯ ವಿಜಯಾ ಬ್ಯಾಂಕಿನಲ್ಲಿ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಸರಿಯಾದ ಮಳೆ ಬೆಳೆ ಬಾರದೆ ಈ ವರ್ಷವು ಅತಿವೃಷ್ಟಿಯಿಂದ ಬೆಳೆ ಹಾನಿಯಾದ ಪರಿಣಾಮ ಮರಳಿ ಸಾಲ ತೀರಿಸುವುದು ಹೇಗೆ ಎಂದು ಮಾನಸಿಕವಾಗಿ ನೊಂದು ತಮ್ಮ ವಾಸದ ಮನೆಯ ಕೋಣೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.

Edited By : Vijay Kumar
Kshetra Samachara

Kshetra Samachara

03/10/2020 11:09 pm

Cinque Terre

14.93 K

Cinque Terre

1

ಸಂಬಂಧಿತ ಸುದ್ದಿ