ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಸಾಲಬಾಧೆ ಎದುರಿಸಲಾಗದೆ ಕುಣಿಕೆಗೆ ಕೊರಳೊಡ್ಡಿದ ರೈತ

ಕುಂದಗೋಳ: ಸಾಲಬಾಧೆ ತಾಳಲಾರದೆ ಕೃಷಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರೇನರ್ತಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಬಸಪ್ಪ ಪರಸಪ್ಪ ಸುಳ್ಳದ (40) ಮೃತ ರೈತ. ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಬಸಪ್ಪ ಅವರೇ ಕುಟುಂಬದ ಜವಾಬ್ದಾರಿ ನಿಭಾಯಿಸುತ್ತಿದ್ದರು. ಇತ್ತ ತಂದೆ ಹೊಲಕ್ಕೆ ಎಣ್ಣೆ, ಗೊಬ್ಬರ ಮನೆಯ ಖರ್ಚಿಗಾಗಿ ಕುಂದಗೋಳ ಪಟ್ಟಣದ ಸಿಂಡಿಕೇಟ್ ಬ್ಯಾಂಕ್‌ನಲ್ಲಿ 4 ಲಕ್ಷ ರೂ. ಸಾಲ ಪಡೆದಿದ್ದರು. ಕಳೆದ 3-4 ವರ್ಷದಿಂದ ಮಳೆ ಬೆಳೆ ಸರಿ ಇರದ ಕಾರಣ ಭೂಮಿಗೆ ಹಾಕಿದ ಬೆಳೆ ಕೈಗೆ ಬಾರದೆ ಜೀವನ ನಡೆಸುವುದು ಕಷ್ಟವಾಗಿತ್ತು. ತಂದೆ ಮಾಡಿದ ಸಾಲ ತೀರಿಸುವುದು ಹೇಗೆ ಎಂದು ಬಸಪ್ಪ ನೊಂದಿದ್ದರು. ಇಂದು ಬಸಾಪೂರ ಹದ್ದಿನಲ್ಲಿರುವ ತಮ್ಮ ಬಾಬತ್ತಿನ ಹೊಲದ ಬೇವಿನ ಮರಕ್ಕೆ ಲುಂಗಿ ಕಟ್ಟಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

06/10/2020 10:18 pm

Cinque Terre

21.76 K

Cinque Terre

0

ಸಂಬಂಧಿತ ಸುದ್ದಿ