ಹುಬ್ಬಳ್ಳಿ: ಸಿಜಿ ಪರಿವಾರದ ಸಂಸ್ಥಾಪಕ ಚಂದ್ರಶೇಖರ ಗುರೂಜಿಯವರಿಗೆ ಧರ್ಮಪತ್ನಿ ಅಂಕಿತಾ ನೇತೃತ್ವದಲ್ಲಿ ಅಂತಿಮ ಪೂಜೆ ಸಲ್ಲಿಸುವ ಮೂಲಕ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ಪೂರ್ಣಗೊಳಿಸಿದರು.
ಹೌದು... ನಿನ್ನೆಯಷ್ಟೇ ಕೊಲೆಯಾಗಿದ್ದ ಚಂದ್ರಶೇಖರ ಗುರೂಜಿಯವರಿಗೆ ಸುಳ್ಳ ರಸ್ತೆಯಲ್ಲಿರುವ ಜಮೀನಿನಲ್ಲಿ ಇಂದು ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಮಠಾಧೀಶರು, ಜನಪ್ರತಿನಿಧಿಗಳ ಸೇರಿದಂತೆ ಭಕ್ತರು ಹಾಗೂ ಸಿಬ್ಬಂದಿ ಪರಿವಾರವೇ ಆಗಮಿಸಿದ್ದು, ಎಲ್ಲ ವಿಧಿವಿಧಾನಗಳು ಪೂರ್ಣಗೊಂಡ ಬೆನ್ನಲ್ಲೇ ಕುಟುಂಬದವರು ಅಂತಿಮ ಪೂಜೆ ಸಲ್ಲಿಸುವ ಮೂಲಕ ಗುರೂಜಿಯವರಿಗೆ ಅಂತಿಮ ವಿಧಾಯ ಹೇಳಿದರು.
ಇನ್ನೂ ರಾಜ್ಯದ ವಿವಿಧ ಮೂಲೆಗಳಿಂದ ಸಂಬಂಧಿಕರು ಆಗಮಿಸಿ ಕೊನೆಯ ಪೂಜೆ ಸಲ್ಲಿಸಿದರು. ಕಣ್ಣೀರ ಅಭಿಷೇಕದ ಮೂಲಕ ಅಗಲಿದ ಗುರೂಜಿಗೆ ಅಂತಿಮ ನಮನ ಸಲ್ಲಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/07/2022 04:56 pm