ಹುಬ್ಬಳ್ಳಿ- ಕಿರಾಣಿ ಸ್ಟೋರ್ ಕಳತನ ಮಾಡಿ ಪರಾರಿಯಾಗಿರುವ ಘಟನೆ ನಗರದ ಆನಂದನಗರದಲ್ಲಿ ನಡೆದಿದೆ...
ಬುಧವಾರ ತಡರಾತ್ರಿ ಅಂಗಡಿಗೆ ಕನ್ನ ಹಾಕಿರುವ ಕಳ್ಳರು, ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಅಂಗಡಿಯ ಲಾಕರ್ ನಲ್ಲಿದ್ದ ಹಣ ಹಾಗೂ ಕೆಲ ದಿನಸಿ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಗ್ರಿಲ್ ಕಟ್ ಮಾಡಿ ಪರಾರಿಯಾಗಿದ್ದಾರೆ. ಇನ್ನು ಅಂಗಡಿಯಲ್ಲಿ ಸಿಸಿಟಿವಿ ಇರುವುದನ್ನು ಮನಗಂಡ ಕಳ್ಳರು ಕೇಬಲ್ ಕಟ್ ಮಾಡಿ ಕಾಲ ಕಿತ್ತಿದ್ದಾರೆ. ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಕೊಂಡಿದ್ದಾರೆ....
Kshetra Samachara
01/10/2020 01:35 pm