ಧಾರವಾಡ: ಸಾರಿಗೆ ಸಂಸ್ಥೆಯ ಬಸ್ ಚಾಲಕನೋರ್ವ ಡ್ರೈವಿಂಗ್ ಮಾಡುತ್ತಲೇ ಪ್ರಯಾಣಿಕರಿಗೆ ಟಿಕೆಟ್ ನೀಡಿರುವ ವೀಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಧಾರವಾಡದಿಂದ ದಾಂಡೇಲಿಗೆ ಈ ಬಸ್ ಹೊರಟಿತ್ತು. ಬಸ್ ಚಾಲಕನೇ ಬಸ್ ತೆಗೆದುಕೊಂಡು ಹೊರಡುವ ಮುನ್ನ ಪ್ರಯಾಣಿಕರಿಗೆ ಟಿಕೆಟ್ ಕೊಟ್ಟು ಹೋಗಬೇಕಾಗುತ್ತದೆ. ಇದು ಡ್ರೈವರ್ ಕಮ್ ಕಂಡಕ್ಟರ್ ಕೆಲಸವಾಗಿದೆ. ಆದರೆ, ಈ ಚಾಲಕ ಡ್ರೈವಿಂಗ್ ಮಾಡುತ್ತಲೇ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿದ್ದ ದೃಶ್ಯ ಕಂಡು ಬಂದಿದೆ.
ಜನದಟ್ಟಣೆ ಇರುವ ಧಾರವಾಡದ ಕೆಸಿಡಿ ಸರ್ಕಲ್ ಮಾರ್ಗವಾಗಿ ಈ ಬಸ್ ಹೋಗಬೇಕಾಗುತ್ತದೆ. ಚಾಲಕನ ಲಕ್ಷ್ಯ ಟಿಕೆಟ್ ಕೊಡುವುದರ ಮೇಲಿದ್ದರೆ ಡ್ರೈವಿಂಗ್ ಮಾಡುವ ವೇಳೆ ಏನಾದರೂ ಹೆಚ್ಚೂ ಕಡಿಮೆ ಆದರೆ ಏನು ಗತಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
Kshetra Samachara
21/06/2022 07:56 pm