ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ನೀರಾವರಿ ಕಾಲೋನಿ ನಿವಾಸಿಗಳ ಸ್ಥಳಾಂತರಕ್ಕೆ 6 ತಿಂಗಳ ಕಾಲಾವಕಾಶ ನೀಡಿ; ಕೋನರಡ್ಡಿ

ನವಲಗುಂದ : ಸೋಮವಾರ ತಾಲ್ಲೂಕಿನ ತಿರ್ಲಾಪುರ ಗ್ರಾಮದ ನಿವಾಸಿಗಳಿಗಳನ್ನು ಪೋಲಿಸ್ ಬಂದೋಬಸ್ತ್ ನಲ್ಲಿ ಮನೆ ಕಾಲಿ ಮಾಡಿಸಿದ ಹಿನ್ನೆಲೆ ನವಲಗುಂದ ನೀರಾವರಿ ಕಾಲೋನಿ ನಿವಾಸಿಗಳು ಮಾಜಿ ಶಾಸಕ ಎನ್.ಹೆಚ್ ಕೋನರಡ್ಡಿ ಅವರಿಗೆ ವಿಷಯ ತಿಳಿಸುತ್ತಲೇ ನಗರದ ಗಣಪತಿ ದೇವಸ್ಥಾನದಲ್ಲಿ ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೋನರಡ್ಡಿ ಅವರು ನವಲಗುಂದ ಹಾಗೂ ಶಲವಡಿ ನೀರಾವರಿ ಕಾಲೋನಿಗಳಲ್ಲಿ ವಾಸಿಸುವ ನಿವಾಸಿಗಳಿಗೆ 6 ತಿಂಗಳ ಕಾಲ‌ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ಮಂಜುನಾಥ ಜಾದವ, ಕೆ.ಎನ್.ಎನ್.ಎಲ್. AEE ಶಿದ್ರಾಮಶೆಟ್ಟರ, ನಿವಾಸಿಗಳಾದ ಶಂಕ್ರಪ್ಪ ಶಲವಡಿ, ಗುರುಸಿದ್ದಪ್ಪ ಲಕ್ಕುಂಡಿ, ಸಿದ್ದಪ್ಪ ಪವಾರ, ನಾರಾಯಣ ಜಾಂಬೋಟಿ, ರಪೀಕ ಬುಕಿಟಗಾರ, ಮಹಾಂತೇಷ ತಿಮ್ಮನಗೌಡ್ರ, ವಿಕಾಸ ತದ್ಯವಾಡಿ, ಶ್ರೀಕಾರ ಕಮ್ಮಾರ, ವಿಶ್ವನಾಥ ಹೆಬ್ಬಳ್ಳಿ, ಅಡಿವಪ್ಪ ಕರಿಸಕ್ರಣ್ಣವರ, ಶಿವಾನಂದ ಜಾದವ, ಮಲ್ಲವ್ವ ತೋಟದ, ಮಲ್ಲಮ್ಮ ಕೌಜಗೇರಿ, ಮೀನಾಕ್ಷಿ ಮುನವಳ್ಳಿ ಮುಂತಾದವರು ಉಪಸ್ಥಿತಿರುದ್ದರು.

Edited By : PublicNext Desk
Kshetra Samachara

Kshetra Samachara

09/11/2021 10:44 am

Cinque Terre

27.4 K

Cinque Terre

1

ಸಂಬಂಧಿತ ಸುದ್ದಿ