ನವಲಗುಂದ : ತಾಲೂಕಿನ ಆಹೆಟ್ಟಿ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ವಿರೂಪಾಕ್ಷ ಪ್ಪಾ ಅಚಮಟ್ಟಿ ಅವರ ಮೇಲೆ ದೌರ್ಜನ್ಯ ವೆಸಗಿ ಕೊಲೆ ಮಾಡಿದ ಪ್ರಥಮ ವರ್ತಮಾನ ವರದಿಯ ಆಧರಿಸಿ ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಡಾ. ಎನ್ ಆರ್ ಪುರುಷೋತ್ತಮ ಅವರು ಸಂತ್ರಸ್ತರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಒಂದು ತಿಂಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳನ್ನು ನೀಡಿ, ಸರ್ಕಾರದಿಂದ ಸಿಗುವ ಸವಲತ್ತು ಗಳು, ಸಂತ್ರಸ್ತರಿಗೆ ದೊರೆಯುವ ಪರಿಹಾರ ಧನ ವಿವರಿಸಿ, ಅವಲಂಬಿತರಿಂದ ಸರ್ಕಾರಿ ನೌಕರಿಗೆ ಪ್ರಸ್ತಾವನೆ ಪಡೆಯಲಾಯಿತು. ಕೊಲೆ ಆರೋಪಿಯನ್ನು ಬಂಧಿಸಲಾಗಿದ್ದು. ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಈ ವೇಳೆ ನವಲಗುಂದ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಕಪಿಲಾ ಯಲಿವಿಗಿ ಇದ್ದರು.
Kshetra Samachara
08/11/2021 12:00 pm