ಧಾರವಾಡ: ಎರಡು ಊರುಗಳ ವಿದ್ಯಾರ್ಥಿಗಳ ಮಧ್ಯೆ ಕಳೆದ ವಾರ ಮಾರಾಮಾರಿ ನಡೆದ ಹಿನ್ನೆಲೆಯಲ್ಲಿ ಒಂದು ಊರಿನ ವಿದ್ಯಾರ್ಥಿಗಳು ಬೇರೆ ಊರಿನ ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಏನಿದು ಪ್ರಕರಣ ಅಂತೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್.
ಧಾರವಾಡ ತಾಲೂಕಿನ ನಿಗದಿ ಗ್ರಾಮದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಳ್ಳಿಗೇರಿ ಹಾಗೂ ನಿಗದಿ ಗ್ರಾಮದ ವಿದ್ಯಾರ್ಥಿಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಕಳೆದವಾರ ಮಾರಾಮಾರಿ ನಡೆದಿತ್ತು.
ಸದ್ಯ ಈ ಜಗಳ ಬೂದಿ ಮುಚ್ಚಿದ ಕೆಂಡದಂತಿದ್ದು, ಹಳ್ಳಿಗೇರಿ ಊರಿನ ವಿದ್ಯಾರ್ಥಿಗಳು ಕಾಲೇಜಿಗೆ ಹೋದರೆ ನಿಗದಿ ಗ್ರಾಮದ ವಿದ್ಯಾರ್ಥಿಗಳು ಹೊಡೆಯುತ್ತಾರೆ ಎಂದು ಭಾವಿಸಿ ಹಳ್ಳಿಗೇರಿ ಗ್ರಾಮದ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುತ್ತಿಲ್ಲ. ಕೇವಲ ವಿದ್ಯಾರ್ಥಿನಿಯರು ಮಾತ್ರ ಕಾಲೇಜಿಗೆ ಹೋಗುತ್ತಿದ್ದು, ಹಳ್ಳಿಗೇರಿಯ ವಿದ್ಯಾರ್ಥಿಗಳು ಕಾಲೇಜಿಗೆ ಬರುವುದನ್ನು ನಿಗದಿ ಗ್ರಾಮದ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಹೀಗಾಗಿ ಹಳ್ಳಿಗೇರಿ ಗ್ರಾಮದ ಹಿರಿಯರು ಕಾಲೇಜಿನ ಪ್ರಾಚಾರ್ಯರನ್ನು ಭೇಟಿ ಮಾಡಿ ಈ ವಿಷಯದ ಕುರಿತು ಚರ್ಚಿಸಲು ನಿರ್ಧರಿಸಿದ್ದಾರೆ.
Kshetra Samachara
29/07/2022 05:57 pm